ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅನೈತಿಕ ಸಂಬಂಧ: ಇಬ್ಬರಿಗೆ ಧರ್ಮದೇಟು

Mainashree
Updated On : 4 Sept 2013, 12:17 pm

ಕ.ಪ್ರ.ವಾರ್ತೆ ಮೈಸೂರು ಸೆ. 3
ಅನೈತಿಕ ಸಂಬಂಧ ಹೊಂದಿದ್ದ ಇಬ್ಬರಿಗೆ ಮಹಿಳಾ ಸಂಘಟನೆಯೊಂದರ ಸದಸ್ಯರು ಧರ್ಮದೇಟು ನೀಡಿರುವ ಘಟನೆ ಮೈಸೂರಿನ ಮೇಟಗಳ್ಳಿಯಲ್ಲಿ ಮಂಗಳವಾರ ನಡೆದಿದೆ.
ಬೆಂಗಳೂರು ಪೀಣ್ಯ ನಿವಾಸಿ ಚಂದ್ರಶೇಖರ್ ಮತ್ತು ಈತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮೈಸೂರಿನ ಮೇಟಗಳ್ಳಿ ನಿವಾಸಿ ಜ್ಯೋತಿ ಧರ್ಮದೇಟು ತಿಂದವರು. ಚಂದ್ರಶೇಖರ್ ಪತ್ನಿ ಇಂದಿರಾ ಮತ್ತು ಪೀಣ್ಯದ ಶಿವಶಕ್ತಿ ಮಹಿಳಾ ಸಂಘದ ಕಾರ್ಯಕರ್ತರು ಈ ಇಬ್ಬರಿಗೆ ಧರ್ಮದೇಟು ನೀಡಿದ್ದಾರೆ.
16 ವರ್ಷಗಳ ಹಿಂದೆ ಇಂದಿರಾ ಅವರನ್ನು ಚಂದ್ರಶೇಖರ್ ವಿವಾಹವಾಗಿದ್ದು, ಇವರಿಗೆ ಪುತ್ರಿಯೊಬ್ಬಳು ಇದ್ದಾಳೆ. 10 ವರ್ಷಗಳ ನಂತರ ಸಣ್ಣಪುಟ್ಟ ವಿಚಾರಗಳಿಗೆ ಜಗಳ ತೆಗೆಯುತ್ತಿದ್ದ ಚಂದ್ರಶೇಖರ, ಮನೆಯಿಂದ ಹೊರಹೋದರೆ 4- 5 ದಿನ ವಾಪಸ್ ಬರುತ್ತಿರಲಿಲ್ಲ. ಕಳೆದ 3- 4 ವರ್ಷಗಳಿಂದ ಪತ್ನಿ ಹಾಗೂ ಮಗಳನ್ನು ತೊರೆದ ಚಂದ್ರಶೇಖರ್ ಮೈಸೂರಿನ ಮೇಟಗಳ್ಳಿಯಲ್ಲಿದ್ದ ಜ್ಯೋತಿಯೊಂದಿಗೆ ನೆಲೆಸಿದ್ದ.
ಪತಿ ಚಂದ್ರಶೇಖರ್ ನೆಲೆ ಕಂಡುಹಿಡಿಯುವ ಸಲುವಾಗಿ ಇಂದಿರಾ ಮಹಿಳಾ ಸಂಘಟನೆಯ ಮೊರೆ ಹೋಗಿದ್ದು, ಸಂಘಟನೆಯವರು ಮೇಟಗಳ್ಳಿಯಲ್ಲಿ ಚಂದ್ರಶೇಖರ್ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಮಂಗಳವಾರ ದಾಳಿ ನಡೆಸಿದ ಇಂದಿರಾ ಮತ್ತು ಮಹಿಳಾ ಸಂಘಟನೆಯವರು ಚಂದ್ರಶೇಖರ್ ಮತ್ತು ಜ್ಯೋತಿಗೆ ಧರ್ಮದೇಟು ನೀಡಿದ್ದಾರೆ.
ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಮೇಟಗಳ್ಳಿ ಠಾಣೆ ಪೊಲೀಸರು ಚಂದ್ರಶೇಖರ್ ಮತ್ತು ಜ್ಯೋತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement