ಅರಸು ಸಮಾಧಿಗೆ ರಘು ಆಚಾರ್ ನಮನ
ಕ.ಪ್ರ.ವಾರ್ತೆ ಹುಣಸೂರು ಸೆ. 3
ಸಾಮಾಜಿಕ ನ್ಯಾಯದ ಪರಿಕಲ್ಪನೆಯಂತೆ ಅಧಿಕಾರ ನೀಡಿ ಪ್ರೋತ್ಸಾಹಿಸಿದ ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸು ಅವರು ಹಾಕಿಕೊಟ್ಟ ಮಾರ್ಗ ನನ್ನಂತವರ ಪಾಲಿಗೆ ಸಂಜೀವಿನಿ ಇದ್ದಂತೆ. ಹೀಗಾಗಿ ಅವರ ಹಾದಿಯಲ್ಲೆ ಸಾಗುತ್ತೇನೆ ಎಂದು ವಿಧಾನ ಪರಿಷತ್ ನೂತನ ಸದಸ್ಯ ರಘು ಆಚಾರ್ ಹೇಳಿದರು.
ತಾಲೂಕಿನ ಅರಸು ಕಲ್ಲಹಳ್ಳಿಗೆ ಮಂಗಳವಾರ ಭೇಟಿ ನೀಡಿ ಅರಸರ ಸಮಾಧಿಗೆ ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದ ನಂತರ ಕಲ್ಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿ, ದೇವರಾಜ ಅರಸು ಅವರು ರಾಜ್ಯದ ಜನತೆಯ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಶೋಷಿತರು, ಹಿಂದುಳಿದ ವರ್ಗಗಳು ಹಾಗೂ ದಲಿತರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯಂತೆ ಅಧಿಕಾರ ನೀಡಿ ಪ್ರೋತ್ಸಾಹಿಸಿದ ಮೇಧಾವಿ ಎಂದರು.
ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾತನಾಡಿ, ದೇವರಾಜ ಅರಸರ ಹಾದಿಯಲ್ಲಿ ರಾಜಕಾರಣ ಮಾಡುತ್ತೇನೆಂದು ಹೇಳಿರುವ ರಘು ಆಚಾರ್ ಅವರು ಉತ್ತಮ ರಾಜಕಾರಣಿಯಾಗಿ ಪ್ರಖ್ಯಾತಿ ಹೊಂದಲಿ ಎಂದು ಆಶಿಸಿದರು. ಅರಸು ಕಲ್ಲಹಳ್ಳಿ ಭೇಟಿ ನೀಡುವ ಮುನ್ನ ಇಲ್ಲಿನ ಎಪಿಎಂಸಿ ಬಳಿಯ ಡಿ. ದೇವರಾಜ ಅರಸರ ಪ್ರತಿಮೆಗೆ ಪುಷ್ಪಮಾಲೆ ಸಲ್ಲಿಸಿ, ನಮಿಸಿದರು. ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಪುರಸಭೆ ಮಾಜಿ ಸದಸ್ಯ ಕೆ.ಪಿ. ಕೃಷ್ಣಚಾರ್, ಪುರಸಭಾ ಸದಸ್ಯ ಸತೀಶ್ಕುಮಾರ್, ಮುಖಂಡರಾದ ನಂದನ್, ನೂತನ್, ಸುನಿಲ್, ಕಲ್ಲಹಳ್ಳಿ ಉದ್ದಯ್ಯ, ಸೋಮಶೇಖರಚಾರ್, ಶಂಕರಚಾರ್, ಚಲುವಚಾರ್, ಲೋಕೇಶ್, ಸ್ವಾಮಿ, ತಾಂಡವಮೂರ್ತಿ ಇದ್ದರು.