ತಿಪ್ಪೂರು ಸಹಕಾರ ಸಂಘ: ಸಿದ್ದೇಗೌಡ ಬಣಕ್ಕೆ ಗೆಲವು
ಕ.ಪ್ರ.ವಾರ್ತೆ ಕೆ.ಆರ್.ನಗರ ಸೆ. 3
ತಾಲೂಕಿನ ತಿಪ್ಪೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಜಿಲ್ಲಾ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಎಸ್. ಸಿದ್ದೇಗೌಡರ ತಂಡ ಗೆಲವು ಸಾಧಿಸುವ ಮೂಲಕ ಕಾಂಗ್ರೆಸ್ ಪಾರಮ್ಯ ಮೆರೆದಿದ್ದು, ಜೆಡಿಎಸ್ ತೀವ್ರ ಮುಖಭಂಗ ಅನುಭವಿಸಿದೆ.
ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಟಿ.ಎಸ್. ಪರಶಿವಮೂರ್ತಿ, ಕೆ.ಆರ್. ರಮೇಶ್, ಕೆ. ಮಹದೇವ, ಟಿ.ಎಸ್. ಶಾಂತರಾಜು ಮತ್ತು ಕೆ.ಎಸ್. ಕೃಷ್ಣ ಆಯ್ಕೆಯಾದರೆ, ಹಿಂದುಳಿದ ವರ್ಗದಿಂದ ಎಸ್. ಸಿದ್ದೇಗೌಡ, ಪ. ಜಾತಿ ಮತ್ತು ಪಂಗಡದಿಂದ ಟಿ.ಆರ್. ಗಂಗಾಧರ, ಮಹಿಳಾ ಮೀಸಲು ಕ್ಷೇತ್ರದಿಂದ ಶಿವಮ್ಮ ಮತ್ತು ಗೌರಮ್ಮ ಹಾಗೂ ಹಾಲಿ ಅಧ್ಯಕ್ಷ ಚಿಕ್ಕರಾಮನಾಯಕ ಸಂಘದ ನೂತನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.
ತಾಪಂ ಸದಸ್ಯೆ ಕಮಲಮ್ಮ ಪ್ರಕಾಶ್, ಟಿಎಪಿಸಿಎಂಎಸ್ ನಿರ್ದೇಶಕ ರಾಜೇಗೌಡ, ಹೆಬ್ಬಾಳು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಮಹದೇವನಾಯಕ, ಡಿ.ಎಸ್. ಗೌರೀಶ್ಕುಮಾರ್, ಚಿಕ್ಕರಾಮೇಗೌಡ, ನಿರ್ದೇಶಕ ಚಿಕ್ಕರಾಮನಾಯಕ ಇದ್ದರು.