ನಂಜನಗೂಡು ತಾ. ಬಿಜೆಪಿ ಪದಾಧಿಕಾರಿಗಳ ಆಯ್ಕೆ
ಕ.ಪ್ರ.ವಾರ್ತೆ ನಂಜನಗೂಡು ಸೆ. 3
ಬಿಜೆಪಿಯ ಪಟ್ಟಣ ಹಾಗೂ ತಾಲೂಕು ಘಟಕಗಳಿಗೆ ಅಧ್ಯಕ್ಷರು ಹಾಗೂ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ಜಿಲ್ಲಾಧ್ಯಕ್ಷ ಹೇಮಂತ್ಕುಮಾರ್ ಗೌಡ ಮಂಗಳವಾರ ಇಲ್ಲಿನ ಕೆಎಚ್ಬಿ ಕಾಲೋನಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರಿಗೆ ವಿತರಿಸಿದರು.
ನಂತರ ಮಾತನಾಡಿ, ಪಕ್ಷಕ್ಕೆ ನಿಷ್ಠೆಯಿಂದ ಗೌರವ ತರುವ ರೀತಿಯಲ್ಲಿ ಜನಪರವಾಗಿ ಹೋರಾಟ ನಡೆಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ತಾ. ಅಧ್ಯಕ್ಷ ಕೆ.ಎಂ. ಮಹೇಶ್, ಜಿಪಂ ಸದಸ್ಯ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಶಿವರಾಂ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ವಳಗೆರೆ ಬಿ. ಸುರೇಶ್, ಜಿಪಂ ಮಾಜಿ ಸದಸ್ಯೆ ಮಂಗಳಾ ಸೋಮಶೇಖರ್, ತಾಪಂ ಸದಸ್ಯರಾದ ರವೀಂದ್ರ ಮಂಜುನಾಥ್, ಪುರಸಭಾ ಸದಸ್ಯರಾದ ಸುಧಾ ಮಹೇಶ್, ದಿನೇಶ್ ಕುಮಾರ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ವಾಲ್ಟರ್ ಬುತೇಲೋ, ಮುಖಂಡರಾದ ಪ್ರೇಮಾ ಶಂಭಯ್ಯ, ರಂಗಸ್ವಾಮಿ, ಶ್ರೀನಿವಾಸ್, ಸಣ್ಣಯ್ಯ, ಸುಬ್ಬಣ್ಣ, ಚಿದಾನಂದ, ಲೋಕೇಶ್, ಮುಳ್ಳೂರು ಶೇಖರ್, ದಾಸಯ್ಯ, ಚಂದ್ರಶೇಖರ್, ರಾಮಣ್ಣ ಇದ್ದರು.