ಮಗುವಿಗೆ ಬಾಸುಂಡೆ ಬರಿಸಿದ ಅಂಗನವಾಡಿ ಕಾರ್ಯಕರ್ತೆ
ಎಚ್.ಡಿ. ಕೋಟೆ: ಂಗನವಾಡಿ ಕೇಂದ್ರವೊಂದರಲ್ಲಿ ನಾಲ್ಕು ವರ್ಷದ ಮಗುವು ಗಲಾಟೆ ಮಾಡಿತು ಎಂಬ ಕಾರಣಕ್ಕೆ ಕಾರ್ಯಕರ್ತೆ ಆ ಮಗುವಿಗೆ ಬೆತ್ತದಿಂದ ಹೊಡೆದು ಬಾಸುಂಡೆ ಬರಿಸಿರುವ ಘಟನೆ ತಾಲೂಕಿನ ಅಣ್ಣೂರು ಗ್ರಾಮದಲ್ಲಿ ನಡೆದಿದೆ. ಅಣ್ಣೂರು ಗ್ರಾಮದ ನಿವಾಸಿ ನಂಜುಂಡಚಾರ್ ಹಾಗೂ ಜ್ಯೋತಿ ಎಂಬುವವರ ಪುತ್ರಿ ಲಾವಣ್ಯ (4) ಎಂಬ ಮಗುವೇ ಕಾರ್ಯಕರ್ತೆಯ ಕೋಪಕ್ಕೆ ಗುರಿಯಾದುದು. ಸೋಮವಾರ ಕೇಂದ್ರದಲ್ಲಿ ಗಲಾಟೆ ಮಾಡಿದಳೆಂಬ ಕಾರಣಕ್ಕಾಗಿ ಆಕೆಯ ಎಡಬಾಗದ ತೋಳು, ಬಲಗೈ ಹಸ್ತದ ಗಿಣ್ಣಿಗೆ ಬೆತ್ತದಿಂದ ಹೊಡೆದು ಬಾಂಸುಂಡೆ ಬರಿಸಿದ್ದಾರೆ. ಈ ವಿಷಯ ತಿಳಿದ ಚೈಲ್ಡ್ ಹೆಲ್ಪ್ಲೈನ್ ಸಿಬ್ಬಂದಿ ಪರಿಶೀಲಿಸಿದರು. ಆರೋಪಿ ಗಿರಿಜಮ್ಮ ಅವರ ವಿರುದ್ಧ ಪೋಷಕರು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ.