ವರ್ಗಾವಣೆಗೊಂಡ ಪಿಡಿಒಗೆ ಸನ್ಮಾನ
ಕ.ಪ್ರ.ವಾರ್ತೆ ರಾವಂದೂರು ಸೆ. 3
ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ರಾವಂದೂರು ಗ್ರಾಪಂ ಅಧ್ಯಕ್ಷ ಸ್ವಾಮಿಗೌಡ ಹೇಳಿದರು.
ಬಡ್ತಿ ಹೊಂದಿ ಕಾರ್ಕಳಕ್ಕೆ ವರ್ಗಾವಣೆಗೊಂಡ ರಾವಂದೂರು ಗ್ರಾಪಂ ಕಚೇರಿಯಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಕೃಷ್ಣಾನಂದ್ ಅವರನ್ನು ಸನ್ಮಾನಿಸಿ ಮಾತನಾಡಿ, ಇಂದಿನ ದಿನಗಳಲ್ಲಿ ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಮೂಲಿಯಾಗಿದ್ದು, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವವರು ಎಲ್ಲೆ ಹೋದರೂ ಕಾರ್ಯನಿರ್ವಹಿಸುತ್ತಾರೆ. ಈಗ ವರ್ಗಾವಣೆಗೊಂಡಿರುವ ಕೃಷ್ಣಾನಂದ ಬಡ್ತಿ ಹೊಂದಿ ಕಾರ್ಕಳದ ತಾಪಂ ವ್ಯವಸ್ಥಾಪಕರಾಗಿರುವುದು ಸಂತಸದ ವಿಷಯ ಎಂದು ತಿಳಿಸಿದರು. ವರ್ಗಾವಣೆಗೊಂಡ ಅಧಿಕಾರಿ ಕೃಷ್ಣಾನಂದ ಮಾತನಾಡಿ, ಗ್ರಾಪಂ ನೌಕರರು ಸಾರ್ವಜನಿಕರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಹಾಗೂ ಯಾವುದೆ ಕೆಲಸಕ್ಕೂ ಕಚೇರಿಗೆ ಸಾರ್ವಜನಿಕರನ್ನು ಅಲೆಸಬಾರದು. ಆದಷ್ಟು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು. ಇದೆ ವೇಳೆ ಗ್ರಾಪಂ ಸದಸ್ಯರಾದ ಎಸ್.ಜೆ. ವಿಜಯ್, ಜಯಣ್ಣ, ಗ್ರಾಪಂ ನೌಕರರಾದ ವಾಮನರಾವ್, ಶ್ರೀಕಂಠಾರಾದ್ಯ, ಮಹದೇವ್, ಸುರೇಶ್, ಸುಬ್ಬಣ್ಣ, ನಟರಾಜು, ಕರೀಗೌಡ, ಮುಖಂಡರಾದ ಆರ್.ಆರ್. ಶಿವರಾಮ್, ಸುರೇಶ್ ಇದ್ದರು.