ವಾಲ್ಮೀಕಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆಗ್ರಹ
ಮೈಸೂರು: ವಾಲ್ಮೀಕಿ ಅಭಿವೃದ್ಧಿ ಪ್ರಾಧಿಕಾರ ರಚನೆ ಸೇರಿದಂತೆ ತಮ್ಮ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಖಿಲ ಕರ್ನಾಟಕ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು. ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪಿಸಬೇಕು. ಸಾಂಪ್ರದಾಯಕ ವಿವಿಗಳಲ್ಲಿ ಜನಾಂಗದ ಕುಲಪತಿ ನೇಮಿಸಬೇಕು. ಪರಿವಾರ ಮತ್ತು ತಳವಾರ ಉಪ ಪಂಗಡಗಳನ್ನು ಪರಿಶಿಷ್ಟ ಪಂಗಡವೆಂದು ಘೋಷಿಸಬೇಕು. ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ನೇರಸಾಲ ಯೋಜನೆ ನೀಡಬೇಕು ಎಂದು ಒತ್ತಾಯಿಸಿದರು. ನಿಗಮ, ಮಂಡಳಿಗೆ ನಾಯಕ ಜನಾಂಗದವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು. ಮೈಸೂರಿನ ಪ್ರಮುಖ ಸ್ಥಳದಲ್ಲಿ ವಾಲ್ಮೀಕಿ ಪುತ್ಥಳಿ ಸ್ಥಾಪಿಸಬೇಕು. ಪ್ರಮುಖ ವೃತ್ತ ಹಾಗೂ ಉದ್ಯಾನವನಕ್ಕೆ ವಾಲ್ಮೀಕಿ ಹೆಸರಿಡಬೇಕು ಆಗ್ರಹಿಸಿದರು. ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ಪದಾಧಿಕಾರಿಗಳಾದ ಪ್ರಭಾಕರ್ ಹುಣಸೂರು, ಶ್ರೀಧರ್ ಚಾಮುಂಡಿಬೆಟ್ಟ, ಸಿ. ಮಹದೇವ್ ಸಾಹುಕಾರಹುಂಡಿ, ರಾಜು, ಕೆರೆಹಳ್ಳಿ ಮಾದೇಶ್, ಪ್ರಕಾಶ್ ಹದಿನಾರು, ರಾಜ್ಕುಮಾರ್, ಕೃಷ್ಣನಾಯಕ, ಮಂಜು ಹೊಸರಾಮನಹಳ್ಳಿ, ಮಲ್ಲೇಶ್, ಲೋಕೇಶ್, ಪುಟ್ಟಸ್ವಾಮಿನಾಯಕ, ಡಿ. ಪ್ರಕಾಶ್, ಎಂ. ಮಹೇಶ್ ಇದ್ದರು.