ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸಂಘಟನಾತ್ಮಕ ಹೋರಾಟ ಅನಿವಾರ್ಯ

Rashmi Kasaragodu
Updated On : 4 Sept 2013, 1:03 am

ಕ.ಪ್ರ.ವಾರ್ತೆ   ಮೈಸೂರು   ಸೆ. 3
ವಿಶ್ವಕರ್ಮ ಸಮುದಾಯದ ರಾಜಕೀಯ ಶಕ್ತಿಗಾಗಿ ಸಂಘಟನಾತ್ಮಕ ಹೋರಾಟ ಅನಿವಾರ್ಯ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ಕಲಾಮಂದಿರದಲ್ಲಿ ಮಹಾಸಭೆಯ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಕಳೆದ ಅನೇಕ ಶತಮಾನಗಳಿಂದ ರಾಜಕೀಯ ಶಕ್ತಿಯಿಂದ ವಂಚಿವಾಗಿರುವ ವಿಶ್ವಕರ್ಮ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಸಂಘಟನಾತ್ಮಕ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಇತರೆ ಸಮಾಜಗಳಂತೆ ಸಂವಿದಾನಬದ್ಧ ಹಕ್ಕು ದೊರಕುವವರಿಗೆ ಹೋರಾಟ ಸಾಗಬೇಕಿದೆ. ಇದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹಾಗೂ ಮಹಿಳೆಯರು ನಾಯಕತ್ವ ವಹಿಸಿಕೊಂಡು ಹೋರಾಟ ನಡೆಸಬೇಕು ಎಂದರು. ವಿಶ್ವಕರ್ಮ ಜನಾಂಗ ಅಲ್ಪಸಂಖ್ಯಾತರಲ್ಲ. ಕರ್ನಾಟಕದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿದೆ. ಕುರುಬರ ನಂತರ ಹಿಂದುಳಿದ ಸಮುದಾಯದಲ್ಲಿ ಎರಡನೇ ಸ್ಥಾನ ಪಡೆದಿದ್ದೇವೆ. ಆದರೆ, ಜನಗಣತಿಯಲ್ಲಿ ಇದನ್ನು ಮರೆಮಾಚವ ಹುನ್ನಾರ ನಡೆದಿದೆ. ಆಂಧ್ರಪ್ರದೇಶದಲ್ಲಿ 65 ಲಕ್ಷ, ತಮಿಳುನಾಡಿನಲ್ಲಿ 60 ಲಕ್ಷ, ಕೇರಳದಲ್ಲಿ 75 ಲಕ್ಷ ಹಾಗೂ ಪಾಂಡಿಚೆರೆಯಲ್ಲಿ 12 ಲಕ್ಷ ವಿಶ್ವಕರ್ಮರಿದ್ದಾರೆ ಎಂದು ತಿಳಿಸಿದರು.
ಕಟ್ಟಡ ಕಾರ್ಮಿಕರ ನಿಗಮಕ್ಕೆ 6 ಕೋಟಿ ನೀಡಿರುವ ಸರ್ಕಾರ 35 ಲಕ್ಷ ಜನರಿರುವ ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಹಣ ನೀಡುವ ವಿಶ್ವಾಸವಿದೆ. 3- 4 ಎಂಎಲ್ಸಿ ಸ್ಥಾನ ಹಾಗೂ ನಿಗಮ, ಮಂಡಳಿಗಳಲ್ಲಿ ನೇಮಕ ಮಾಡಬೇಕು. ಜನಾಂಗಕ್ಕೆ ರಾಜಕೀಯ ಶಕ್ತಿ ತುಂಬುವಂತೆ ಒತ್ತಾಯಿಸಲು ಸೋನಿಯಾಗಾಂಧಿ ಅವರ ಬಳಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಪಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರು ನಮ್ಮ ಬೇಡಿಕೆಗೆ ಸ್ಪಂದಿಸುವ ಭರವಸೆಯಿದೆ. ಸೆ. 17ರಂದು ಬೆಂಗಳೂರಿನಲ್ಲಿ ನಡೆಯುವ ವಿಶ್ವಕರ್ಮ ಜಯಂತಿಯಲ್ಲಿ ಸಮುದಾಯದ ಬೇಡಿಕೆಯನ್ನು ಮಂಡಿಸಲಾಗುವುದು ಎಂದರು. ಅಮೋಘ ವಾಹಿನಿ ಮುಖ್ಯಸ್ಥ ಬಿಳಿಗಿರಿ ರಂಗನಾಥ್ ಮುಖ್ಯ ಅತಿಥಿಯಾಗಿದ್ದರು. ಸಂಘದ ಮುಖಂಡರಾದ ಮಂಡ್ಯದ ವೈ.ಡಿ. ಶ್ರೀನಿವಾಸ್, ಎಚ್.ಪಿ. ಸತೀಶ್, ನಂಜನಗೂಡಿನ ನಂದಕುಮಾರ್ ಹಾಗೂ ಮಳವಳ್ಳಿಯ ಪ್ರಕಾಶ್ ಇದ್ದರು.  ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರು ವಿಶ್ವಕರ್ಮ ಪ್ರಾಸ್ತಾವಿಕ ಮಾತುಗಳಾಡಿದರು. ಶ್ರೀನಿವಾಸ್ ಸ್ವಾಗತಿಸಿದರು. ನಂತರ ರಂಸಮಂಜರಿ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement