ಅಕ್ರಮ ಗಾಂಜಾ ಗಿಡ ಜಪ್ತಿ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಸೆ. 4
ಅಕ್ರಮವಾಗಿ ಗಾಂಜಾ ಬೆಳೆ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಪಿರಿಯಾಪಟ್ಟಣ ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಮಾಲಂಗಿ ಗೋಮಾಳ ಗ್ರಾಮದ ಜಯಲಕ್ಷ್ಮಮ್ಮ ಹಾಗೂ ಆಕೆಯ ಪತಿ ಕಾಳನಾಯಕ ತಮ್ಮ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದು, ಖಚಿತ ಮಾಹಿತಿ ಮೇರೆಗೆ ಸರ್ಕಲ್ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್ ಮಾರ್ಗದರ್ಶನದಲ್ಲಿ ಎಸ್ಐ ರಫೀಕ್ ನೇತೃತ್ವದ ಪೊಲೀಸರ ತಂಡ ಜಮೀನಿಗೆ ಭೇಟಿ ನೀಡಿ, ಸುಮಾರು 6 ಗಾಂಜಾ ಗಿಡ ವಶಪಡಿಸಿಕೊಂಡು, ಆರೋಪಿ ಜಯಲಕ್ಷ್ಮಮ್ಮರನ್ನು ಬಂಧಿಸಿದ್ದಾರೆ. ಆಕೆಯ ಪತಿ ಕಾಳನಾಯಕ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಶೋಧ ನಡೆಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ಮುದ್ದುಮಹದೇವಯ್ಯ ಭೇಟಿ ನೀಡಿ ಪರಿಶೀಲಿಸಿದರು. ಕಾರ್ಯಾಚರಣೆಯಲ್ಲಿ ಎಎಸ್ಐ ಮಹದೇವಯ್ಯ, ಸಿಬ್ಬಂದಿಗಳಾದ ಬೀರೇಗೌಡ, ನಾರಾಯಣಶೆಟ್ಟಿ, ರವೀಶ್, ಎಂ.ಡಿ. ತಮ್ಮಣ್ಣ, ಮಂಜುನಾಥ್, ದೊಡ್ಡೇಗೌಡ ಪಾಲ್ಗೊಂಡಿದ್ದರು.