ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪರಿಸರ ಗಣಪತಿ; ನಾಳೆ ಜಾಥಾ

Rashmi Kasaragodu
Updated On : 5 Sept 2013, 12:09 pm

ಮೈಸೂರು: ಪೌರಪ್ರಜ್ಞೆಗಾಗಿ ಮಕ್ಕಳ ಚಳವಳಿ (ಸಿಎಂಸಿಎ) ನಗರಪಾಲಿಕೆ ಜತೆಗೂಡಿ ಸೆ. 6ರ ಬೆಳಗ್ಗೆ 10.30ಕ್ಕೆ ಪಾಲಿಕೆ ಮುಂಭಾಗದಿಂದ ಪರಿಸರಸ್ನೇಹಿ ಗಣಪತಿ ಜಾಥಾ ಆರಂಭಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಚಾಲನೆ ನೀಡುವರು. ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು, ತನ್ವೀರ್ ಸೇಠ್, ಭಾಗವಹಿಸುವರು.
ಸಮಾರೋಪ
ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶ್ರೀಮಠದಲ್ಲಿ ಕಳೆದ ಒಂದು ತಿಂಗಳಿಂದ ಏರ್ಪಡಿಸಿದ್ದ ಶ್ರಾವಣ ಮಾಸದ ಪ್ರವಚನ ಸಮಾರೋಪ ಸಮಾರಂಭವು ಸೆ. 6ರ ಸಂಜೆ 6ಕ್ಕೆ ನಡೆಯಲಿದೆ.
ಸಂವಾದ
ಮೈಸೂರು: ಮೈಸೂರು ವಿವಿ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗದಿಂದ ಸೆ. 6ರ ಬೆಳಗ್ಗೆ 10.30ಕ್ಕೆ ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ನಟಿ ಮಾಳವಿಕ ಅವಿನಾಶ್ ಅವರೊಂದಿಗೆ ಸಂವಾದ ಏರ್ಪಡಿಸಲಾಗಿದೆ ಎಂದು ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಮಹೇಶ್ಚಂದ್ರ ಗುರು ತಿಳಿಸಿದ್ದಾರೆ.
ಎಂ.ಕಾಂ ಪದವಿ
ಮೈಸೂರು: ಸರಸ್ವತಿಪುರಂನಲ್ಲಿರುವ ಟಿಟಿಎಲ್ ಕಾಲೇಜಿನಲ್ಲಿ ಎಂ.ಕಾಂ ಸ್ನಾತಕೋತ್ತರ ಪದವಿ ಆರಂಭಿಸಿದ್ದು, ಉನ್ನತ ಶಿಕ್ಷಣ ಇಲಾಖೆ ಹಾಗೂ ಮೈಸೂರು ವಿವಿ ಸಂಯೋಜನೆಗೆ ಒಳಪಟ್ಟಿದೆ. ಆಸಕ್ತರು ದಂಡ ಶುಲ್ಕವಿಲ್ಲದೆ ಸೆ. 16 ರೊಳಗೆ ಪ್ರವೇಶಾತಿ ಪಡೆಯಬಹುದು. ದೂ. 0821- 2540783 ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement