ಮೂಲ ಸೌಕರ್ಯಕ್ಕೆ ಧರ್ಮಸೇನ ಆದ್ಯತೆ ನೀಡಲಿ: ರಮೇಶ್
ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 4
ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ, ಸಮುದಾಯದವರೊಬ್ಬರು ವಿಧಾನ ಪರಿಷತ್ಗೆ ಆಯ್ಕೆಯಾಗುವಂತೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್ ಹೇಳಿದರು.
ವಿಧಾನ ಪರಿಷತ್ಗೆ ಆಯ್ಕೆಗೊಳ್ಳಲು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಈ ಹಿಂದಿನಿಂದಲೂ ಮಾದಿಗ ಸಮುದಾಯವರೇ ಅವಕಾಶ ನೀಡುವುದು ವಾಡಿಕೆಯಾಗಿತ್ತು. ಅದರಂತೆ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಎನ್. ರಾಚಯ್ಯ ಅವರ ಪುತ್ರ ಆರ್. ಧರ್ಮಸೇನ ಅವರನ್ನು ಆಯ್ಕೆ ಮಾಡಿದ ಮುಖ್ಯಮಂತ್ರಿ, ಸಚಿವರಾದ ಮಹದೇವಪ್ಪ ಹಾಗೂ ಮಹದೇವಪ್ರಸಾದ್ ಅವರಿಗೆ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾದಿಗ ಸಮುದಾಯಕ್ಕೆಂದೆ ದಿ.ಎನ್. ರಾಚಯ್ಯ ಅವರು ನಿವೇಶನ ಕಾಯ್ದಿರಿಸಿದ್ದ ಕಡತಗಳು ಕಣ್ಮರೆಯಾಗುವಂತೆ ಮಾಡಲಾಗಿದೆ ಎಂದು ರಮೇಶ್ ದೂರಿದರು.
ಬಾಬುಜಗಜೀವನ್ರಾಮ್ ಸಂಘಟನೆಗಳ ತಾಲೂಕು ಒಕ್ಕೂಟದ ಅಧ್ಯಕ್ಷ ಮೂಗೂರು ಸಿದ್ದರಾಜು ಮಾತನಾಡಿದರು. ಪಪಂ ಸದಸ್ಯೆ ರತ್ನಮ್ಮ, ಬಾಬುಜಗಜೀವನ್ರಾಮ್ ಸಮತಾ ಆಂದೋಲನಾ ತಾಲೂಕು ಅಧ್ಯಕ್ಷ ಹುಣಸೂರು ಮಹದೇವಸ್ವಾಮಿ, ಮುಖಂಡ ಕೆ. ರಾಚು, ಲಿಂಗಣ್ಣ, ಯಜಮಾನ್ ನರಸಿಂಹಯ್ಯ ಇದ್ದರು.