ಸವಾರರಿಗೆ ಉಚಿತ ಹೆಲ್ಮೆಟ್, ಮೈಸೂರು ಪಾಕ್ ವಿತರಣೆ
ಕ.ಪ್ರ.ವಾರ್ತೆ ಮೈಸೂರು ಸೆ. 4
ಕೆ.ಎಂ. ಪ್ರವೀಣ್ಕುಮಾರ್ ಚಾರಿಟಬಲ್ ಟ್ರಸ್ಟ್ನವರು ಸಂಚಾರ ಜಾಗೃತಿ ಮೂಡಿಸಲು ಸಲುವಾಗಿ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮವನ್ನು ಬುಧವಾರ ಆಯೋಜಿಸಿದ್ದರು. ಮಹಾರಾಜ ಸಂಸ್ಕೃತ ಪಾಠಶಾಲೆ ವೃತ್ತದಲ್ಲಿ ನಗರ ಸಂಚಾರ ಪೊಲೀಸರ ಸಮ್ಮುಖದಲ್ಲಿ ಹೆಲ್ಮೆಟ್ ವಿತರಿಸಲಾಯಿತು. ಬೈಕಿನಲ್ಲಿ ಹೆಲ್ಮೆಟ್ ಧರಿಸದವರನ್ನು ಸಂಚಾರ ಪೊಲೀಸರು ತಡೆದು 100 ದಂಡ ವಿಧಿಸಿದರು. ನಂತರ ಟ್ರಸ್ಟ್ ವತಿಯಿಂದ ಹೆಲ್ಮೆಟ್ ನೀಡಿದರು. ಇದರಿಂದ ಕೆಲವು ಸವಾರರು ಕಕ್ಕಾಬಿಕ್ಕಿಯಾದರು. ಹೆಲ್ಮೆಟ್ ಧರಿಸಿದ್ದ ಸವಾರರಿಗೆ ಮೈಸೂರುಪಾಕ್ ವಿತರಿಸಲಾಯಿತು.
ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಂ.ಎಂ. ಮಹದೇವಯ್ಯ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ದೀಪಕ್, ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಕಾಂಗ್ರೆಸ್ ಮುಖಂಡ ಶ್ರೀನಾಥ್ ಬಾಬು, ಬಿಜೆಪಿ ಮುಖಂಡ ಜೋಗಿ ಮಂಜು, ಟ್ರಸ್ಟ್ನ ಅಧ್ಯಕ್ಷ ವಿಕ್ರಮ್, ಪದಾಧಿಕಾರಿಗಳಾದ ಜಿ. ರಾಘವೇಂದ್ರ, ಎಸ್.ಎನ್. ರಾಜೇಶ್, ಕೆ.ಎಸ್. ಮುರಳೀಧರ್, ಸಂಚಾರ ಎಸ್ಐಗಳಾದ ಜಯಪ್ರಕಾಶ್, ಸತೀಶ್ ಇದ್ದರು.