'ಹಳ್ಳಿಗರ ಉನ್ನತ ಶಿಕ್ಷಣಕ್ಕೆ ಮಠಗಳು ಕಾರಣ'
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 4
ಮಠಗಳು ಜಾತಿ ಭೇದ ಮಾಡದೆ ಸರ್ವರನ್ನು ಸಮನಾಗಿ ಕಂಡು ಅಕ್ಷರ ದಾಸೋಹ ಮತ್ತು ಅನ್ನದಾಸೋಹದ ಕಾಯಕ ಮಾಡುತ್ತಿರುವುದರಿಂದ, ಹಳ್ಳಿಯ ಬಡವರು ಉನ್ನತ ಮತ್ತು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಹೇಳಿದರು.
ತಾಲೂಕಿನ ಹಾಡ್ಯ ಗ್ರಾಮದ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ನಡೆದ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಗಳ 97ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾವಂದೂರು ಮುರುಘಾಮಠದ ಮೋಕ್ಷಪತಿ ಶ್ರೀಗಳ ಸಮ್ಮಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಲೀಲಾವತಿ ಉಪನ್ಯಾಸ ನೀಡಿದರು. ಹಂಪಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿ.ಇ. ತ್ರಿವೇಣಿ ವಿದ್ಯಾರ್ಥಿಗಳು ಹೊರತಂದಿರುವ ಪ್ರಣತಿ ಎಂಬ ಸಾಂದರ್ಭಿಕ ವಾರ್ಷಿಕ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಮುಖ್ಯ ಶಿಕ್ಷಕ ಎ.ಸಿ. ಜಗದೀಶ್, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಹಾಡ್ಯ ಕುಮಾರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಪ್ರಸಾದ್, ಗ್ರಾಮದ ಮುಖಂಡರಾದ ಶಿವಣ್ಣ, ಸೋಮಶೇಖರಯ್ಯ, ಶಿಕ್ಷಕರಾದ ಜಿ.ಎಂ. ಶಿವಪ್ರಸಾದ್, ಬಿ.ಎನ್. ಪ್ರಕಾಶ್, ಚಂದ್ರಶೇಖರ್, ಸಿದ್ದಲಿಂಗಪ್ಪ, ಸಿ.ಎಂ. ರವೀಶ್ಕುಮಾರ್, ಬಸವರಾಜಸ್ವಾಮಿ, ಎಸ್. ನೀಲಕಂಠ, ಎಸ್.ಪಿ. ಸುನಿಲ್, ಬಿ. ಜೀವನ್ಕುಮಾರ್, ಎಚ್.ಬಿ. ಕುಮಾರಾಚಾರ್ ಇದ್ದರು.