ಹೊಸ ಪಿಂಚಣಿ ನೀತಿ ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಸೆ. 4
ಹೊಸ ಪಿಂಚಣಿ ನೀತಿ ವಿರೋಧಿಸಿ ನೈಋತ್ಯ ರೇಲ್ವೆ ಮಜ್ದೂರ್ ಸಂಘದವರು ಮೈಸೂರು ರೈಲು ನಿಲ್ದಾಣದಲ್ಲಿ ಬುಧವಾರ ಪ್ರತಿಭಟಿಸಿದರು.
ಯಾವುದೇ ಕಾರಣಕ್ಕೂ ಹೊಸ ಪಿಂಚಣಿ ನೀತಿ ಜಾರಿಗೊಳಿಸಬಾರದು. ಇದರಿಂದ ರೇಲ್ವೆ ನಿವೃತ್ತ ನೌಕರರು ಮತ್ತು ಕುಟುಂಬದವರಿಗೆ ತೊಂದರೆ ಆಗಲಿದೆ. ಹೀಗಾಗಿ ಹಳೆಯ ಪಿಂಚಣಿ ನೀತಿಯನ್ನೆ ಮುಂದುವರಿಸಬೇಕು. ಒಂದು ವೇಳೆ ಹೊಸ ಪಿಂಚಣಿ ನೀತಿ ಜಾರಿಗೊಳಿಸಿದರೆ ರೈಲು ತಡೆದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ನಂತರ ರೈಲು ನಿಲ್ದಾಣ ಎದುರಿರುವ ಡಿಆರ್ಎಂ ಕಚೇರಿಗೆ ತೆರಳಿ ತಮ್ಮ ಮನವಿ ಸಲ್ಲಿಸಿದರು. ಸಂಘದ ವಿಭಾಗೀಯ ಕಾರ್ಯದರ್ಶಿ ಎಸ್.ಎನ್. ಮೊಹಮ್ಮದ್ ನೇತೃತ್ವ ವಹಿಸಿದ್ದರು.