ಇತರರಿಗೆ ಕಲಿಸುವುದುಪವಿತ್ರ ಕಾರ್ಯ: ಸಿದ್ದೇಶ್ವರಶ್ರೀ
ಕ.ಪ್ರ.ವಾರ್ತೆ ಸುತ್ತೂರು ಸೆ. 5
ಜ್ಞಾನಿಗಳ ಮಾತುಗಳನ್ನು ಶಾಂತವಾಗಿ ಕುಳಿತು ಕೇಳಿಸಿಕೊಳ್ಳುವುದರೊಂದಿಗೆ ಅಂತಹ ನುಡಿಗಳನ್ನು ಇತರರಿಗೂ ಕಲಿಸುವುದು ಪವಿತ್ರ ಕಾರ್ಯ ಎಂದು ವಿಜಾಪುರದ ಜ್ಞಾನಯೋಗಾಶ್ರವುದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಅವರು, ಕೆಟ್ಟದ್ದನ್ನು ಕೇಳಿಸಿಕೊಳ್ಳದೆ, ಕೆಟ್ಟದ್ದನ್ನು ನೋಡದೆ, ಕೆಟ್ಟದ್ದನ್ನು ಮಾಡದೆ ದೇಹವೆಂಬ ಮನೆಯನ್ನು ಪರಿಶುದ್ಧವಾಗಿಟ್ಟುಕೊಳ್ಳಬೇಕಾಗಿದೆ. ಮಾನವ ಹಣ, ಅಧಿಕಾರ, ಅಂತಸ್ತುಗಳ ಚಿಂತೆ ಮಾಡದೆ ಮನಸ್ಸನ್ನು ಬೇಕಾಬಿಟ್ಟಿ ಹರಿಯಬಿಡದೆ ನಿಶ್ಚಿಂತನಾಗಿ ಬದುಕಬೇಕು. ನಾವು ನಮ್ಮಂತೆಯೇ ಇರುವುದನ್ನು ರೂಢಿಸಿಕೊಳ್ಳಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ.ಟಿ.ಎನ್. ಪ್ರಭಾಕರ್ ಮಾತನಾಡಿ, ಮಾನವನಲ್ಲಿ ಬೌದ್ಧಿಕ, ಭಾವನಾತ್ಮಕ, ಶಾರೀರಿಕ ಹಾಗೂ ಆಧ್ಯಾತ್ಮಿಕ ವಿಕಾಸವಾದಾಗ ಮಾತ್ರ ವಿದ್ಯೆ ಪರಿಪೂರ್ಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಮಾಜಿ ಶಾಸಕರಾದ ಎಚ್. ಗಂಗಾಧರನ್, ಎಸ್. ಬಾಲರಾಜ್, ಪ್ರೊ.ಎಸ್. ನಂಜುಂಡಯ್ಯ, ಹಿರಿಯ ಕವಿ ಕೆ.ಸಿ. ಶಿವಪ್ಪ ಇದ್ದರು.