ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಎರಡು ದಿನದಲ್ಲಿ ಚಾ.ನಗರಕ್ಕೆ ಕುಡಿಯುವ ನೀರು

Rashmi Kasaragodu
Updated On : 6 Sept 2013, 12:02 pm

ಕ.ಪ್ರ.ವಾರ್ತೆ  ಟಿ.ನರಸೀಪುರ  ಸೆ. 5
ಕೆಟ್ಟು ಹೋದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ತುರ್ತಾಗಿ ದುರಸ್ತಿಗೊಳಿಸಿ ಚಾಮರಾಜನಗರಕ್ಕೆ ಎರಡು ದಿನದೊಳಗೆ ಕುಡಿಯುವ ನೀರು ಸರಬರಾಜು ಮಾಡುವುದಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.
ಪಟ್ಟಣದ ಕಪಿಲಾ ನದಿ ದಡದ ಚಾಮರಾಜನಗರ ಕುಡಿಯುವ ನೀರು ಸರಬರಾಜು ಯೋಜನೆಯ ಪಂಪ್ ಹೌಸ್ ಅನ್ನು ಗುರುವಾರ ಬೆಳಗ್ಗೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನ ಬೆಳಗೊಳದಿಂದ ಟ್ರಾನ್ಸ್‌ಫಾರಂ ಅನ್ನು ತಂದು ಪಂಪ್‌ಹೌಸ್‌ಗೆ ವಿದ್ಯುತ್ ಪೂರೈಸಿ ಚಾ. ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಸ್ಥಳದಲ್ಲೆ ಇದ್ದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕಳೆದ 12 ದಿನಗಳಿಂದ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದಾಗಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ. ತಮ್ಮನ್ನು ಚುನಾಯಿಸಿದ ಜನರ ಆಕ್ರೋಶವನ್ನು ಶಾಸಕರಾದ ತಾವು ಎದುರಿಸಬೇಕಿದೆ. ಆದ್ದರಿಂದ ತುರ್ತು ಕ್ರಮಕೈಗೊಂಡು ನೀರು ಸರಬರಾಜು ಪುನಾರಂಭಿಸಬೇಕು. ಅಗತ್ಯ ಸಹಕಾರವನ್ನು ನೀಡುವಂತೆ ಮೈಸೂರು ಪಾಲಿಕೆ ಆಯುಕ್ತ ಡಾ.ಎಂ.ಆರ್. ರವಿ ಅವರಿಗೆ ದೂರವಾಣಿ ಮೂಲಕ ಮನವಿ ಮಾಡಿದರು. ಶಾಶ್ವತವಾಗಿ ಪಂಪ್ ಹೌಸ್ ಅಭಿವೃದ್ಧಿಪಡಿಸಿ, ಕೊಳವೆ ಸಂಪರ್ಕವನ್ನು ಹೊಸದಾಗಿ ಅಳವಡಿಸಲು 45 ಕೋಟಿ ಯೋಜನೆ ರೂಪಿಸಲಾಗಿದೆ. ಗಾಳಿಪುರದ ಯಡಬೆಟ್ಟ ಬಳಿ 7.85 ಲಕ್ಷ ವೆಚ್ಚದಲ್ಲಿ 10 ಲಕ್ಷ ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಮದರ್ ವಾಟರ್ ಟ್ಯಾಂಕ್ ನಿರ್ಮಾಣ ಮಾಡಿ ನೀರಿನ ಬವಣೆ ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement