ಎಸ್ಸೆಸ್ಸೆಲ್ಸಿ ಮೇಯರ್, ಪಿಯುಸಿ ಉಪಮೇಯರ್
ಮೈಸೂರು: ಮೈಸೂರು ನಗರಪಾಲಿಕೆಯಲ್ಲಿ 27ನೇ ಮೇಯರ್ ಆಗಿ ಆಯ್ಕೆಯಾಗಿರುವ ಎನ್.ಎಂ. ರಾಜೇಶ್ವರಿ ಸೋಮು ಅವರು ಎಸ್ಸೆಸ್ಸೆಲ್ಸಿ ಹಾಗೂ ಉಪಮೇಯರ್ ಆಗಿ ಆಯ್ಕೆಯಾಗಿರುವ ವಿ. ಶೈಲೇಂದ್ರ ಅವರು ಪಿಯುಸಿ ಓದಿದ್ದಾರೆ. ವಿನಾಯಕನಗರ (ಪಡುವಾರಹಳ್ಳಿ) ನಿವಾಸಿ ಟಿ. ಸೋಮು ಅವರ ಪತ್ನಿ ಎನ್.ಎಂ. ರಾಜೇಶ್ವರಿ ಅವರು ಪಾಲಿಕೆ ವಾರ್ಡ್ ನಂ. 33 ರಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ. ಅಶೋಕಪುರಂ 11ನೇ ಕ್ರಾಸ್ ನಿವಾಸಿ ಪಿ. ವೆಂಕಟರಾಜು ಅವರ ಪುತ್ರ ವಿ. ಶೈಲೇಂದ್ರ ಅವರು ವಾರ್ಡ್ ನಂ. 9 ರಿಂದ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ರಾಜೇಶ್ವರಿ ಮತ್ತು ಶೈಲೇಂದ್ರ ಅವರಿಗೆ ಮೇಯರ್ ಮತ್ತು ಉಪ ಮೇಯರ್ ಸ್ಥಾನ ಸಿಕ್ಕಿರುವುದು ವಿಶೇಷ ಹಾಗೂ ಮೀಸಲಾತಿಯ ಫಲವಾಗಿದೆ.