ತಾಲೂಕು ಬಿಜೆಪಿ ಘಟಕಕ್ಕೆ ಪದಾಧಿಕಾರಿಗಳ ನೇಮಕ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ಸೆ. 5
ತಾಲೂಕು ಬಿಜೆಪಿ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಯುವ ಮೋರ್ಚಾ ಅಧ್ಯಕ್ಷರಾಗಿ ಹೆಗ್ಗನೂರು ಸತೀಶ್ಗೌಡ, ಪ್ರಧಾನ ಕಾರ್ಯದರ್ಶಿ ಉಮೇಶ್, ದಲಿತ ಮೋರ್ಚಾ ಅಧ್ಯಕ್ಷರಾಗಿ ಉಯ್ಯಂಬಳ್ಳಿ ಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಮಹದೇವ್, ರೈತ ಮೋರ್ಚಾ ಅಧ್ಯಕ್ಷರಾಗಿ ಮಗ್ಗೆ ರೂಪೇಶ್, ಪ್ರಧಾನ ಕಾರ್ಯದರ್ಶಿಯಾಗಿ ಮಹದೇವಪುರ ಗುರುಸ್ವಾಮಿ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮುತ್ತಿಗೆಹುಂಡಿ ಮೀನಾಕ್ಷಿ, ಪ್ರಧಾನ ಕಾರ್ಯದರ್ಶಿಯಾಗಿ ಹಂಚೀಪುರ ಕಾಮಾಕ್ಷಿ. ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಸರಗೂರು ಎಸ್.ಎನ್. ಸತ್ಯನಾರಾಯಣ, ಪ್ರಧಾನ ಕಾರ್ಯದರ್ಶಿಯಾಗಿ ತುಂಬಸೋಗೆ ಎನ್. ರವಿ, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ಕೆ.ಬೆಳತೂರು ಅಂಕನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ಚಕ್ಕೂರು ಮಂಜು, ಸ್ಲಂ ಮೋರ್ಚಾ ಅಧ್ಯಕ್ಷ ನಾಯಕನಹುಂಡಿ ಚಂದ್ರಶೇಖರ್ ಪ್ರಧಾನ ಕಾರ್ಯದರ್ಶಿ ಚೌಡಹಳ್ಳಿ ಚಿನ್ನಸ್ವಾಮಿ, ಅಲ್ಪಸಂಖ್ಯಾತರ ಅಧ್ಯಕ್ಷರಾಗಿ ನಾಗನಹಳ್ಳಿ ಕೆ. ಬಾಲರಾಜು, ಪ್ರಧಾನ ಕಾರ್ಯದರ್ಶಿ ಎಚ್.ಡಿ. ಕೋಟೆ ಅಂತೋಣಿರಾಜ್ ನೇಮಕವಾಗಿದ್ದಾರೆ.