ಪಕ್ಷೇತರರ, ಇತರರ ಭಿನ್ನರಾಗ
ಮೈಸೂರು: ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ವಿಭಿನ್ನ ಪಾತ್ರ ವಹಿಸಿದರು. ಮೇಯರ್, ಉಪ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆಲವರು ತಟಸ್ಥವಾಗಿ ಉಳಿದು ಆಶ್ಚರ್ಯ ಮೂಡಿಸಿದರು. ಪಕ್ಷೇತರ ಅಭ್ಯರ್ಥಿಗಳಾದ ಚೆನ್ನಪ್ಪ ಜೆಡಿಎಸ್, ಆರ್.ನಾಗರಾಜು ಮತ್ತು ಸುಹೇಲ್ ಬೇಗ್ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದರು. ಆರ್. ರವೀಂದ್ರಕುಮಾರ್, ಎಚ್.ಎನ್. ಶ್ರೀಕಂಠಯ್ಯ ಮತ್ತು ಶಿವಮ್ಮ ಅವರು ಮೇಯರ್ ಸ್ಥಾನಕ್ಕೆ ಮತ ಹಾಕದೆ ತಟಸ್ಥವಾಗಿದ್ದರು. ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನ ಭಾಗ್ಯವತಿ ಪರವಾಗಿ ಮತ ಚಲಾಯಿಸಿದರು. ಬಿಎಸ್‌ಆರ್ ಕಾಂಗ್ರೆಸ್‌ನ ಸಮೀನಾ ಜಬೀನ್ ಕಾಂಗ್ರೆಸ್, ಕೆಜೆಪಿ ಅಭ್ಯರ್ಥಿ ಬಿ.ಎಲ್. ಭೈರಪ್ಪ ಜೆಡಿಎಸ್ ಅಭ್ಯರ್ಥಿಗಳು ಬೆಂಬಲಿಸಿದರು. ಎಸ್‌ಡಿಪಿಐ ಅಭ್ಯರ್ಥಿಗಳಾದ ಎಸ್.ಸ್ವಾಮಿ ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಇವರ ಪರವಾಗಿ ರೇಷ್ಮಾ ಜಬೀನ್ ಮಾತ್ರ ಮತ ಚಲಾಯಿಸಿದರು. ಎಸ್‌ಡಿಪಿಐನ ಮತ್ತೊಬ್ಬ ಸದಸ್ಯ ಸಿ. ಮಹದೇವ ಅವರು ಉಪ ಮೇಯರ್ ಸ್ಥಾನಕ್ಕೆ ಭಾಗ್ಯವತಿಗೆ ಮತ ಹಾಕಿದರು. ಸ್ವಾಮಿ ಅವರಿಗೆ ಮತ ಹಾಕಲು ಮುಂದಾದರು. ಆದರೆ, ಚುನಾವಣಾಧಿಕಾರಿಗಳು ಸ್ವಾಮಿ ಮತವನ್ನು ಪರಿಗಣಿಸಿಲ್ಲ. ಸಿ. ಮಹದೇವ ಗೊಂದಲವನ್ನು ಗಮನಿಸಿದ ಇತರೆ ಸದಸ್ಯರು ನಗೆಗಡಲಲ್ಲಿ ತೇಲಿದರು. ಇದನ್ನು ಕಂಡ ಸ್ವಾಮಿ ಸಹ ನಕ್ಕು ಸುಮ್ಮನಾದರು. ಪಕ್ಷೇತರ ಅಭ್ಯರ್ಥಿಗಳಾದ ಆರ್. ನಾಗರಾಜು, ಸುಹೇಲ್ ಬೇಗ್, ಬಿಎಸ್‌ಆರ್ ಕಾಂಗ್ರೆಸ್‌ನ ಸಮೀನಾ ಜಬೀನ್, ಕೆಜೆಪಿ ಅಭ್ಯರ್ಥಿ ಬಿ.ಎಲ್. ಭೈರಪ್ಪ ಅವರು ಸ್ಥಾಯಿ ಸಮಿತಿ ಸದಸ್ಯರಾಗಿ ಸ್ಥಾನ ಗಿಟ್ಟಿಸಿಕೊಂಡಿದ್ದ ಮತ್ತೊಂದು ವಿಶೇಷ.