ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಪಠ್ಯ ಆಧುನೀಕರಣಗೊಳಿಸಿ

Rashmi Kasaragodu
Updated On : 6 Sept 2013, 12:00 pm

ಮೈಸೂರು: ಉನ್ನತ ಶಿಕ್ಷಣದಲ್ಲಿ ಪಠ್ಯವನ್ನು ಆಧುನೀಕರಣಗೊಳಿಸಬೇಕಿದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಎಂ. ಮಾದಯ್ಯ ಅಭಿಪ್ರಾಯಪಟ್ಟರು.
ಗುರುವಾರ ಮೈಸೂರು ವಿವಿಯ ಕ್ರಾಫರ್ಡ್ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಉನ್ನತ ಶಿಕ್ಷಣದ ದೂರದೃಷ್ಟಿತ್ವ ಬದಲಾಗಬೇಕು. ಹಿಂದೆ ಬೋಧಿಸಿಕೊಂಡು ಬರುತ್ತಿರುವ ಪಠ್ಯವಸ್ತು ಬದಲಾಗಬೇಕು. ಕಾಲಕ್ಕೆ ತಕ್ಕಂತೆ ಪ್ರಚಲಿತ ವಿಷಯಗಳೊಂದಿಗೆ ಪಠ್ಯ ಪರಿಷ್ಕೃತವಾಗಬೇಕು ಎಂದರು.
ಉನ್ನತ ಶಿಕ್ಷಣದಲ್ಲಿ ಕೇವಲ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಪತ್ತೆ ಹಚ್ಚಲು ಪರೀಕ್ಷೆ ನಡೆಸಬಾರದು. ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ವಿಶ್ಲೇಷಣಾತ್ಮಕವಾಗಿ ಪ್ರಸ್ತುತಪಡಿಸುವ ಕೌಶಲಗಳನ್ನು ಅಧ್ಯಾಪಕರು ಹೇಳಿಕೊಡಬೇಕು. ಭಾರತ ಉನ್ನತ ಶಿಕ್ಷಣಕ್ಕೆ ಜಿಡಿಪಿಯಲ್ಲಿ ಶೇ.6 ರಷ್ಟು ಹಣ ಮೀಸಲಿಡುವಂತೆ ಕೊಠಾರಿ ಆಯೋಗ ಅಭಿಪ್ರಾಯಪಟ್ಟಿದೆ. ಆದರೆ, ಇಂದು ಕೇವಲ ಶೇ. 3.6 ರಷ್ಟನ್ನು ಮಾತ್ರ ಮೀಸಲಿಡುತ್ತಿದ್ದೇವೆ ಎಂದು ತಿಳಿಸಿದರು.
ಮೈಸೂರು ವಿವಿಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ಶೇಷಗಿರಿರಾವ್, ಪ್ರೊ.ಗಾಯತ್ರಿ, ಪ್ರೊ.ಸಿ.ಬಿ. ರಾಮಚಂದ್ರ, ಪ್ರೊ.ಶ್ರೀನಿವಾಸ, ಪ್ರೊ.ರಂಗನಾಥ್, ಪ್ರೊ.ಗುರುಮೂರ್ತಿ, ಪ್ರೊ.ರಾಮಚಂದ್ರ, ಪ್ರೊ.ಸೆಬಾಸ್ಟಿಯನ್ ಜೋಸೆಫ್, ಪ್ರೊ.ಕೃಷ್ಣ, ಪ್ರೊ.ದೇವಕಿ, ಪ್ರೊ.ಮೆವಾಸಿಂಗ್, ಪ್ರೊ.ಗೌರಮ್ಮ, ತರುಣ್‌ಕುಮಾರ್, ಪ್ರೊ.ರಂಗರಾಜು ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರಿನ ಪಿಇಎಸ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಪ್ರೊ.ಎಂ.ಆರ್. ದೊರೆಸ್ವಾಮಿ, ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ಕುಲಸಚಿವ ಪ್ರೊ.ಸಿ. ಬಸವರಾಜು, ಶ್ರೀ ಜಯದೇವರಾಜೇ ಅರಸ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement