ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳು ಬಿಜೆಪಿ ಪಾಲು
ಕ.ಪ್ರ.ವಾರ್ತೆ ಮೈಸೂರು ಸೆ. 5
ನಗರಪಾಲಿಕೆ 4 ಸ್ಥಾಯಿಸಮಿತಿಗಳು ಬಿಜೆಪಿ ಪಾಲಾಗಿವೆ. ಈ ನಾಲ್ಕು ಸ್ಥಾಯಿ ಸಮಿತಿಗಳಿಗೆ ತಲಾ 7 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಜೆಡಿಎಸ್ ಸಹಕಾರದೊಂದಿಗೆ ಬಿಜೆಪಿ ಸದಸ್ಯರು ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವುದು ಖಚಿತವಾಗಿದೆ.
ಪ್ರಸ್ತುತ ಸದಸ್ಯರ ಆಯ್ಕೆ ಮಾತ್ರ ನಡೆದಿದ್ದು, ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯೂ ಇನ್ನಷ್ಟೇ ಆಗಬೇಕಿದೆ. ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ 9 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ ಜೆಡಿಎಸ್ನ ಟಿ.ರಾಮು, ಎಸ್ಡಿಪಿಐನ ಸಿ. ಮಹದೇವ ಅವರ ನಾಮಪತ್ರಗಳು ತಿರಸ್ಕೃತಗೊಂಡವು. ಜೆಡಿಎಸ್ನಿಂದ ಎಂ. ಶಿವಣ್ಣ, ಟಿ. ರಾಮು ನಾಮಪತ್ರ ಸಲ್ಲಿಸಿದ್ದು, ಈ ಇಬ್ಬರಿಗೂ ಒಬ್ಬರೇ ಸೂಚಕರು, ಒಬ್ಬರೇ ಅನುಮೋದಕರು ಆಗಿದ್ದರು. ಹೀಗಾಗಿ ಮೊದಲ ನಾಮಪತ್ರ ಸಲ್ಲಿಸಿದ ಶಿವಣ್ಣ ನಾಮಪತ್ರ ಅಂಗಿಕರಿಸಿ, ರಾಮು ನಾಮಪತ್ರ ತಿರಸ್ಕರಿಸಲಾಯಿತು.
ಆಯ್ಕೆಯಾದ ಸದಸ್ಯರು...
1. ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ- ಹಸೀನಾ ತಾಜ್ (ಜೆಡಿಎಸ್), ಎಂ.ಕೆ. ಶಂಕರ್ (ಬಿಜೆಪಿ), ಬಿ.ವಿ. ಮಂಜುನಾಥ್ (ಬಿಜೆಪಿ), ಶಿವಮಾಧು (ಕಾಂಗ್ರೆಸ್), ಕೆ.ಸಿ. ಶೌಕತ್ ಪಾಷ (ಕಾಂಗ್ರೆಸ್), ಬಿ.ಎಲ್. ಭೈರಪ್ಪ (ಕೆಜೆಪಿ) ಮತ್ತು ಆರ್. ಕಮಲಾ (ಕಾಂಗ್ರೆಸ್).
2. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ- ಟಿ. ಗಿರೀಶ್ಪ್ರಸಾದ್ (ಬಿಜೆಪಿ), ಜಿ.ಎಚ್. ವನಿತಾ ಪ್ರಸನ್ನ (ಬಿಜೆಪಿ), ಸುಹೇಲ್ ಬೇಗ್ (ಪಕ್ಷೇತರ), ರತ್ನಮ್ಮ (ಕಾಂಗ್ರೆಸ್), ಸಿ.ಎಸ್. ರಜನಿ (ಕಾಂಗ್ರೆಸ್), ಇಂದಿರಾ ಮಹೇಶ್ (ಜೆಡಿಎಸ್) ಮತ್ತು ಟಿ. ರಾಮು (ಜೆಡಿಎಸ್).
3. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ- ಎಂ.ರಮೇಶ್ (ಕಾಂಗ್ರೆಸ್), ಆರ್. ನಾಗರಾಜು (ಪಕ್ಷೇತರ), ಫೈರೋಜ್ ಖಾನ್ (ಜೆಡಿಎಸ್), ಅನುಸೂಯ (ಜೆಡಿಎಸ್), ಮ.ವಿ. ರಾಮಪ್ರಸಾದ್ (ಬಿಜೆಪಿ), ಶಿವಕುಮಾರ್ (ಬಿಜೆಪಿ) ಮತ್ತು ಅಯಾಜ್ ಪಾಷ (ಕಾಂಗ್ರೆಸ್).
4. ಲೆಕ್ಕಪತ್ರ ಸ್ಥಾಯಿ ಸಮಿತಿ- ಬಿ.ಎಂ. ನಟರಾಜ್ (ಜೆಡಿಎಸ್), ಸಿ. ರಮೇಶ್ (ಜೆಡಿಎಸ್), ಮಹದೇವಮ್ಮ (ಬಿಜೆಪಿ), ಬಿ.ಕೆ. ಪುಷ್ಪವತಿ ಧನರಾಜ್ (ಬಿಜೆಪಿ), ಎಂ. ಸುನಿಲ್ (ಕಾಂಗ್ರೆಸ್), ಸಮೀನಾ ಜಬೀನ್ (ಬಿಎಸ್ಆರ್ ಕಾಂಗ್ರೆಸ್) ಮತ್ತು ಡಿ. ನಾಗಭೂಷಣ್ (ಕಾಂಗ್ರೆಸ್).