ಮುಸ್ಲಿಮರಿಗೆ ಡ್ರೈ ಫುಡ್ ವಿತರಣೆ
ಕ.ಪ್ರ.ವಾರ್ತೆ ಭೇರ್ಯ ಸೆ. 5
ಕೆ.ಆರ್. ನಗರ ತಾಲೂಕಿನ ಭೇರ್ಯ ಗ್ರಾಮದಲ್ಲಿ 400ಕ್ಕೂ ಹೆಚ್ಚು ಮುಸ್ಲಿಂ ಕುಟುಂಬದವರಿಗೆ ಶಾಸಕ ಸಾ.ರಾ. ಮಹೇಶ್ ಅವರ ಬೆಂಬಲಿಗರು ಬುಧವಾರ ಹಮ್ಮಿಕೊಂಡಿದ್ದ ಡ್ರೈ ಫುಡ್ ವಿತರಣೆಯನ್ನು ತಾಲೂಕು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ ರಾಮೇಗೌಡ ವಿತರಿಸಿದರು. ನಂತರ ಮಾತನಾಡಿದ ಅವರು, ದುಡ್ಡಿಗೋಸ್ಕರ ರಾಜಕಾರಣ ಮಾಡುವ ಜಾಯಮಾನ ನಮ್ಮದಲ್ಲ. ಅದರ ಅಗತ್ಯವೋ ಶಾಸಕ ಮಹೇಶ್ಗೆ ಇಲ್ಲ. ನಮ್ಮ ಶ್ರಮಕ್ಕೆ ಭಗವಂತ ಸಾಕಷ್ಟು ಫಲ ನೀಡಿದ್ದಾನೆ. ಯಾವ ಟೀಕೆಗೂ ಬಗ್ಗುವಂತಹವರಲ್ಲ. ಮಾತು ಕೊಟ್ಟಂತೆ ಮತದಾರರಿಗೆ ನಿರಂತರ ಸೇವೆ ಮಾಡುತ್ತಿರುವ ಗುಣವಂತ ವ್ಯಕ್ತಿಯ ಬಗ್ಗೆ ಕೆಲವರು ಮಾಡುತ್ತಿರುವ ಆರೋಪ ಸರಿಯಲ್ಲ ಎಂದರು. ಶಾಸಕರ ಆಪ್ತ ಕಾರ್ಯದರ್ಶಿ ಅರುಣ್ಕುಮಾರ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ಖಾನ್, ಎಪಿಎಂಸಿ ನಿರ್ದೇಶಕ ಎಚ್.ಕೆ. ಓಬೇಗೌಡ, ಡೇರಿ ಅಧ್ಯಕ್ಷ ಶಿವಕುಮಾರ್, ಗ್ರಾಪಂ ಉಪಾಧ್ಯಕ್ಷ ಕುಮಾರ್, ಸದಸ್ಯ ಸೋಮು, ಜೆಡಿಎಸ್ ಮುಖಂಡರಾದ ಲೋಕೇಶ್, ಇಲ್ಲು, ನಾಸರ್ಖಾನ್, ನಟರಾಜ್, ಜುನೇದ್ಣಬೇಗ್, ಬಾಬು, ರಾಜು, ಸಿರಾಜ್ ಬೇಗ್, ಸರದಾರ್ ಇದ್ದರು.