ಮೈಸೂರಲ್ಲಿ ಸೈಕೋ ಶಂಕರ್ ವದಂತಿ!
ಮೈಸೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ತಪ್ಪಿಸಿಕೊಂಡಿರುವ ಸೈಕೋ ಕಿಲ್ಲರ್ ಜೈಶಂಕರ್ ಮೈಸೂರಿನಲ್ಲಿ ಇರುವುದಾಗಿ ವದಂತಿ ಹಬ್ಬಿದೆ. ಆದರೆ, ಇದನ್ನು ಪೊಲೀಸರು ನಿರಾಕರಿಸಿದ್ದಾರೆ. ಕೆಎಸ್‌ಆರ್‌ಟಿಸಿ ಗ್ರಾಮಾಂತರ ಬಸ್ ನಿಲ್ದಾಣದ ಎದುರಿನ ಮಹೇಶ್ವರಿ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ಜೈಶಂಕರ್ ಬಂದಿದ್ದ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಜೈಶಂಕರ್ ಫೋಟೋದೊಂದಿಗೆ ಬಾರ್‌ಗೆ ಹೋಗಿ ಮಾಲೀಕ, ಸಿಬ್ಬಂದಿ ಮತ್ತು ಗ್ರಾಹಕರನ್ನು ವಿಚಾರಿಸಿದ್ದಾರೆ. ಅಲ್ಲದೆ, ಸಿಸಿಟಿವಿಯಲ್ಲಿ ದಾಖಲಾಗಿದ್ದ ವ್ಯಕ್ತಿಯ ಚಹರೆಯನ್ನು ಪರಿಶೀಲಿಸಿದ್ದಾರೆ. ಫೋಟೋದಲ್ಲಿದ್ದ ವ್ಯಕ್ತಿಯನ್ನು ನಾವ್ಯಾರೂ ನೋಡಿಲ್ಲ ಎಂದಿದ್ದಾರೆ. ವದಂತಿ ಹಿನ್ನೆಲೆಯಲ್ಲಿ ಶೋಧ ಮುಂದುವರಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದರು.