ರಾವಂದೂರು: 110 ಮಂದಿಗೆ ಪಿಂಚಣಿ ಪತ್ರ
ಕ.ಪ್ರ.ವಾರ್ತೆ ರಾವಂದೂರು ಸೆ. 5
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಹೋಬಳಿಯಲ್ಲಿ ಅರ್ಜಿ ಸಲ್ಲಿಸಿದ್ದ 110 ಮಂದಿಗೆ ಪಿಂಚಣಿ ಆದೇಶ ಪತ್ರ ವಿತರಿಸಲಾಗಿದೆ ಎಂದು ಉಪ ತಹಸೀಲ್ದಾರ್ ಎಲ್.ಸಣ್ಣರಾಮಪ್ಪ ಹೇಳಿದರು.
ಇಲ್ಲಿನ ನಾಡ ಕಚೇರಿಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರ ಪಿಂಚಣಿ ಅದಾಲತ್ ನಡೆಸುತ್ತಿದ್ದು, ಪ್ರತಿ ತಿಂಗಳಿನಲ್ಲಿ ಒಂದು ಬಾರಿ ಪಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು. ಈ ಹಿಂದೆ ನಡೆದ ಅದಾಲತ್ ಕಾರ್ಯಕ್ರಮದಲ್ಲಿ 9 ಅರ್ಜಿಗಳು ಬಂದಿದ್ದು, ಅರ್ಜಿದಾರರಿಗೆ ಅಗತ್ಯವಾದ ಪಿಂಚಣಿ ದೊರೆಯುವಂತೆ ಮಾಡಲಾಗಿದೆ ಎಂದು ತಿಳಿಸಿದರು. ಇದರಲ್ಲಿ 41 ವಿಧವಾ ವೇತನ ಅರ್ಜಿಗಳು, 51 ಸಂಧ್ಯಾಸುರಕ್ಷಾ ಯೋಜನೆ ಅರ್ಜಿ, 12 ಅಂಗವಿಕಲ ಅರ್ಜಿ, 6 ಇಂದಿರಾಗಾಂಧಿ ವೃದ್ದಾಪ್ಯ ವೇತನ ಅರ್ಜಿಗಳನ್ನು ವಿಲೇವಾರಿ ಮಾಡಿ, ಫಲಾನುಭವಿಗಳಿಗೆ ಆದೇಶ ನೀಡಲಾಗಿದೆ. ಈ ಬಾರಿ 15 ಅರ್ಜಿಗಳು ಬಂದಿರುವುದಾಗಿ ಹೇಳಿದರು.
ಆರ್ಐ ಪುಟ್ಟಶೆಟ್ಟಿ, ಗ್ರಾಮಲೆಕ್ಕಿಗರಾದ ಕೋಟೇಗೌಡ, ನಾಗೇಶ್, ಕುಳ್ಳಯ್ಯ, ತಿಮ್ಮೇಗೌಡ, ಬಸವಣ್ಣ, ನಂದೀಶ್, ಪಾಂಡು ಇದ್ದರು.