ವೈದ್ಯಕೀಯ ಸಹಾಯಕನಿಗೆ ಬೀಳ್ಕೊಡುಗೆ
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 5
ತಾಲೂಕಿನ ಹೆಬ್ಬಾಳು ಪಶುವೈದ್ಯ ಆಸ್ಪತ್ರೆಯಲ್ಲಿ ಸಹಾಯಕರಾಗಿ ನಿರಂತರವಾಗಿ ಸೇವೆಸಲ್ಲಿಸಿ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗಳಿಸಿದ್ದ ಕೆ.ಆರ್. ಮನೋಹರ್ ಅವರನ್ನು ಹೆಬ್ಬಾಳು ಗ್ರಾಪಂ ವ್ಯಾಪ್ತಿಯಲ್ಲಿನ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಸನ್ಮಾನಿಸಿ ಬೀಳ್ಕೊಟ್ಟರು.
ಹೆಬ್ಬಾಳು ಬಸ್ ನಿಲ್ದಾಣದ ಅವರಣದಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮನೋಹರ್ ದಂಪತಿಗೆ ಶಾಲು ಹೊದಿಸಿ ನೆನೆಪಿನ ಕಾಣಿಕೆ, ಫಲ ತಾಂಬೂಲ ನೀಡಿದ ಗ್ರಾಮಸ್ಥರು, ಗ್ರಾಪಂ ಸದಸ್ಯರು ಮತ್ತು ವಿವಿಧ ಸಂಘದ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಮನೋಹರ್ ಅವರು ತಮ್ಮ ಸರ್ಕಾರಿ ಸೇವೆಯನ್ನು ನಿರ್ವಹಿಸುವುದರ ಜತೆಗೆ ರಸ್ತೆ ಬದಿ ಮತ್ತು ಸರ್ಕಾರಿ ಜಾಗದಲ್ಲಿ ಗಿಡಮರ ನೆಟ್ಟು ಬೆಳೆಸಿದ್ದು ಪರಿಸರ ಪ್ರೇಮ ಬೆಳೆಸಿಕೊಂಡಿದ್ದರು.
ಗ್ರಾಪಂ ಅಧ್ಯಕ್ಷೆ ಅನುಸೂಯ ಶ್ರೀನಿವಾಸ್, ಮಾಜಿ ಅಧ್ಯಕ್ಷ ಮಾದೇಗೌಡ, ಯುವ ಮುಖಂಡರಾದ ಬೀಮೇಗೌಡ, ಹರೀಶ್, ಕೃಷ್ಣೇಗೌಡ, ಪುಟ್ಟೇಗೌಡ, ಯಜಮಾನರಾದ ಸಿದ್ದೇಗೌಡ, ಸುಂದರೇಗೌಡ, ಡಾ. ಸಂಜಯ್ ಇದ್ದರು.