ಸುತ್ತೂರಿನಲ್ಲಿ ಸಾಮೂಹಿಕ ವಿವಾಹ
ಸುತ್ತೂರು: ಇಲ್ಲಿನ ಶ್ರೀಕ್ಷೇತ್ರದಲ್ಲಿ ಸೆ.15 ರಂದು ತಿಂಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ. 10 ದಿನಗಳ ಮುಂಚಿತವಾಗಿ ಆಡಳಿತಾಧಿಕಾರಿಗಳು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು, ಸುತ್ತೂರು ಇವರನ್ನು ನೇರವಾಗಿ ಸಂಪರ್ಕಿಸಿ ಅಥವಾ ದೂ. 08221-232054, 232033 ಕರೆ ಮಾಡಿ ಮಾಹಿತಿ ಪಡೆದು ನೋಂದಣಿ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಮಾಹಿತಿ ನೀಡಲು ಸೂಚನೆ
ಸರಗೂರು: ಇಲ್ಲಿನ ಪಪಂಯು ಆಸ್ತಿ ತೆರಿಗೆ ಮತ್ತ ಲೆಕ್ಕವನ್ನು ಗಣಕೀಕರಣಗೊಳಿಸಿದೆ. ಪಪಂ ವ್ಯಾಪ್ತಿಯ ನಾಗರಿಕರು ಪಪಂನಲ್ಲಿ ವಿತರಿಸಿರುವ ಫಾರಂ ಸಿ ನಲ್ಲಿ ನಮೂದಿಸಿರುವ ಮಾಹಿತಿಯನ್ನು ನಾಗರಿಕರು ಒಪ್ಪದೇ ಇದ್ದಲ್ಲಿ, ಸರಿಯಾದ ಮಾಹಿತಿಯನ್ನು ಕೈಯಿಂದ ನಮೂದಿಸಿ, ಫಾರಂ ಸಿ ಯ ಕೆಳಭಾಗದಲ್ಲಿ ಸರಿ ಮಾಡಿದ ಕಲಂನ್ನು ಟಿಕ್ ಮಾಡಿ, ತಿದ್ದುಪಡಿ ಮಾಡಿರುವ ಮೂಲಪ್ರತಿಯನ್ನು 15 ದಿನಗಳೊಳಗಾಗಿ ಪಪಂ ಕಚೇರಿಗೆ ಹಿಂದಿರುಗಿಸುವಂತೆ ಪಪಂ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಚೇರಿ ವೇಳೆಯಲ್ಲಿ ಸಂಬಂಧಿಸಿದ ನೌಕರರನ್ನು ಸಂಪರ್ಕಿಸಬಹುದು.