ಸುದ್ದಿ ಸಂಕ್ಷೇಪ
ನಾಳೆ ಜಯಂತಿ
ಮೈಸೂರು: ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸೆ. 7ರ ಬೆಳಗ್ಗೆ 11ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮಿಗಳವರ 98ನೇ ಜಯಂತಿ ಮಹೋತ್ಸವ ನಡೆಯಲಿದೆ. ಅರಮನೆ ಜಪದಕಟ್ಟೆ ಮಠದ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸುವರು. ಪ್ರೊ.ಟಿ.ಡಿ. ಸುಬ್ಬಣ್ಣ ಅಧ್ಯಕ್ಷತೆ ವಹಿಸುವರು. ಎಂಡಿಎ ಆಯುಕ್ತ ಎಸ್. ಪಾಲಯ್ಯ ನುಡಿ ನಮನ ಸಲ್ಲಿಸುವರು.
ಗೌರಿಪೂಜೆ
ಚಾಮುಂಡಿಪುರಂನ ಸೋದರಿ ಮಹಿಳಾ ಎಜುಕೇಷನಲ್ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆ.8ರ ಬೆಳಗ್ಗೆ 9.30ಕ್ಕೆ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದ ಎದುರಿನ ಗುರುದೇವಾಶ್ರಮದಲ್ಲಿ ಗೌರಿಪೂಜೆ ಏರ್ಪಡಿಸಿದೆ. ಸೆ.7 ಸಂಜೆಯೊಳಗೆ ಕಾರ್ಯದರ್ಶಿಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ. 9632079668 ಸಂಪರ್ಕಿಸಿ.
ಕಥೆ ಕೇಳೋಣ ಬನ್ನಿ
ಕುವೆಂಪುನಗರದ ಚಿತ್ರಭಾನು ರಸ್ತೆಯಲ್ಲಿರುವ ಕಲಾಸುರುಚಿಯಲ್ಲಿ ಸೆ.7ರ ಸಂಜೆ 4.30 ರಿಂದ 5.30ರವರೆಗೆ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿವೃತ್ತ ಪ್ರಧಾನ ತಾಂತ್ರಿಕ ಅಧಿಕಾರಿ ಮಕ್ಕಳಿಗೆ ಟಿ.ಎನ್. ಇಂದಿರಾ ಕಥೆ ಹೇಳುವರು. ಮಾಹಿತಿಗಾಗಿ ದೂ. 2541795 ಸಂಪರ್ಕಿಸಬಹುದು.
ನಾಟಕ ಪ್ರದರ್ಶನ
ರಂಗವಲ್ಲಿ ತಂಡದ ವತಿಯಿಂದ ಸೆ.7, 14 ಮತ್ತು 21ರಂದು ಸಂಜೆ 7ಕ್ಕೆ ರಂಗಾಯಣ ಶ್ರೀರಂಗ ಸಭಾಂಗಣದಲ್ಲಿ ಎ.ಕೆ. ರಾಮಾನುಜನ್ ಮತ್ತು ಪೂರ್ಣಚಂದ್ರ ತೇಜಸ್ವಿ ಅವರ ಕತೆಯಾಧಾರಿತ ನಾಟಕ ಅಣ್ಣಯ್ಯನ ಮಾನವಶಾಸ್ತ್ರ ಮತ್ತು ಮಾಯಾಮೃಗ ಎಂಬ ಎರಡು ನಾಟಕಗಳನ್ನು ಪ್ರದರ್ಶುವರು.
ಸಮಾರಂಭ
ಮೈಸೂರು ವಿವಿ ದಿ ಯೂನಿವರ್ಸಿಟಿ ಸ್ಕೂಲ್ ಆಫ್ ಡಿಸೈನ್ ಜೋನಲ್ ನಾಸಾ ಕನ್ವೆನ್ಷನ್-ಜೋನ್5 ಅನ್ಲರ್ನ್ 2013 ಸಮಾರೋಪ ಸಮಾರಂಭವು ಸೆ.7ರ ಸಂಜೆ 4ಕ್ಕೆ ಮಾನಸಗಂಗೋತ್ರಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆಯಲಿದೆ. ಸಚಿವ ಡಾ.ಎಚ್.ಸಿ. ಮಹದೇವಪ್ಪ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು.
ಪದಗ್ರಹಣ
ರೋಟರಿ ಮೈಸೂರು ಮಿಡ್ಟೌನ್ ವತಿಯಿಂದ ಶಾರದವಿಲಾಸ ಕಾಲೇಜಿನ ರೋಟ್ರ್ಯಾಕ್ಟ್ ಕ್ಲಬ್ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸೆ.7ರ ಮಧ್ಯಾಹ್ನ 12.30ಕ್ಕೆ ಶಾರದಾವಿಲಾಸ ಕಾಲೇಜಿನ ಆಡಿಯೋ ವಿಶಲ್ ಸೆಂಟರ್ನಲ್ಲಿ ನಡೆಯಲಿದೆ.