ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗಣಪತಿ ಪ್ರತಿಷ್ಠಾಪಕರಿಗೆ ಸೂಚನೆ

Rashmi Kasaragodu
Updated On : 7 Sept 2013, 12:53 pm

ಮೈಸೂರು: ನಗರದ ವಿವಿಧ ಬಡಾವಣೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ಸೆ.7ರ ಸಂಜೆ 4 ರೊಳಗೆ ಸಂಬಂಧಿಸಿದ ಪೊಲೀಸ್ ಠಾಣೆಯ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಪೊಲೀಸ್ ಠಾಣೆಯಲ್ಲಿ ನಿಗದಿತ ಅರ್ಜಿ ಪಡೆದು ಸೆ.7 ರೊಳಗೆ ಸಲ್ಲಿಸಬೇಕು, ಪ್ಲಾಸ್ಟರ್ ಆಫ್ ಪ್ಯಾರೀಸ್ನಿಂದ ತಯಾರಿಸಿದ, ಸೀಸ ಮುಕ್ತ ಬಣ್ಣದ ಗಣಪತಿ ಪ್ರತಿಷ್ಠಾಪಿಸಬೇಕು, ಬಲವಂತವಾಗಿ ಚಂದಾ ವಸೂಲಿ ಮಾಡಬಾರದು, ಗಣಪತಿ ಪ್ರತಿಷ್ಠಾಪಿಸುವ ಸ್ಥಳ, ವಿಸರ್ಜಿಸುವ ಸ್ಥಳ, ಮೆರವಣಿಗೆ ಮಾರ್ಗ ತಿಳಿಸಬೇಕು. ಗಣಪತಿ ಪ್ರತಿಷ್ಠಾಪಿಸುವ ಸ್ಥಳದ ಮಾಲೀಕರಿಂದ ಒಪ್ಪಿಗೆ ಪತ್ರ ಪಡೆದು ಲಗತ್ತಿಸಬೇಕು, ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಧ್ವನಿವರ್ಧಕ ಬಳಸಬೇಕು. ಮನೋರಂಜನಾ ಕಾರ್ಯಕ್ರಮ ರಾತ್ರಿ 10ರೊಳಗೆ ಮುಗಿಸಬೇಕು, ಯಾವುದೆ ಬಹುಮಾನ ಯೋಜನೆ ನಡೆಸಬಾರದು ಎಂದು ತಿಳಿಸಿದ್ದಾರೆ.
ಗಣಪತಿ ಪ್ರತಿಷ್ಠಾಪಕರು ತಮ್ಮ ಸಂಘಟನೆಯ ಆಯ್ದ ಆರು ಮಂದಿಗೆ ಸಂಪೂರ್ಣ ಉಸ್ತುವಾರಿ ವಹಿಸಬೇಕು. ಗಣಪತಿ ವಿಸರ್ಜನೆ ವೇಳೆ ನುರಿತ ಈಜುಗಾರರನ್ನು ಇರಿಸಿಕೊಂಡಿರಬೇಕು. ಮಹಾನಗರ ಪಾಲಿಕೆ ಸೂಚಿಸಿದ ಸ್ಥಳದಲ್ಲಿ ವಿಸರ್ಜಿಸಬೇಕು. ಅನಧಿಕೃತ ವಿದ್ಯುತ್ ಸಂಪರ್ಕ ಪಡೆಯಬಾರದು. ಅಗ್ನಿ ಆಕಸ್ಮಿಕ ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು, ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಿ ಮತ್ತು ಸೀಸದಿಂದ ತಯಾರಿಸಿದ ಗಣಪತಿ ಮಾರಾಟ ಮಾಡುವುದು, ಪ್ರತಿಷ್ಠಾಪನೆ ಕಂಡು ಬಂದಲ್ಲಿ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement