ವಿಕಾಸ್ ಗೌಡಗೆ ಅಭಿನಂದನೆ
ಕ.ಪ್ರ. ವಾರ್ತೆ ಮೈಸೂರು ಸೆ.6
ನಗರದ ಕೆನರಾ ಬ್ಯಾಂಕ್ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಯುವಕರನ್ನು ಉತ್ತೇಜಿಸುವ ಸಲುವಾಗಿ ಭಾರತೀಯ ಅಥ್ಲೀಟ್ ವಿಕಾಸ್ ಗೌಡ ಅವರನ್ನು ಅಭಿನಂದಿಸಿತು.
ನಗರದ ಸ್ಟಡಿ ಸರ್ಕಲ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಕಾಸ್ಗೆ ಫಲ ತಾಂಬೂಲು ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿತು. ಈ ವೇಳೆ ಮಾತನಾಡಿದ ಸ್ಟಡಿ ಸರ್ಕಲ್ನ ಡಾ.ಎಸ್.ಟಿ. ರಾಮಚಂದ್ರ, ಕೆನರಾ ಬ್ಯಾಂಕ್ ಕ್ರೀಡಾ ಕ್ಷೇತ್ರದಲ್ಲಿನ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ. ವಿಶ್ವ ಅಥ್ಲೆಟಿಕ್ ಚಾಂಪಿಯನ್ನಲ್ಲಿ ಉತ್ತಮ ಸಾಧನೆ ಮಾಡಿದ ವಿಕಾಸ್ ಮೇಲೆ ಇಡಿ ದೇಶ ಭರವಸೆ ಇಟ್ಟಿದೆ. ಅವರು ಮುಂದಿನ ದಿನಗಳಲ್ಲಿಯೂ ಉತ್ತಮ ಸಾಧನೆ ಮಾಡುವ ವಿಶ್ವಾಸ ಇದೆ ಎಂದರು.
ಅಭಿನಂದನೆ ಸ್ವೀಕರಿಸಿದ ವಿಕಾಸ್ಗೌಡ ಮಾತನಾಡಿ, ಯುವಕರು ಅಥ್ಲೆಟಿಕ್ನಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಭಾರತವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯ. ಅಲ್ಲದೆ ಪೋಷಕರು ತಮ್ಮ ಮಕ್ಕಳನ್ನು ಶಾಲಾ ಮಟ್ಟದಿಂದಲೆ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸಲು ಉತ್ತೇಜನ ನೀಡಬೇಕು ಎಂದು ಹೇಳಿದರು. ವಿಕಾಸ್ ಗೌಡ ಅವರ ತಂದೆ ಹಾಗೂ ಕ್ರೀಡಾ ತರಬೇತುದಾರ ಶಿವೆಗೌಡ ಮಾತನಾಡಿದರು.