ಸೇನಾ ಬ್ಯಾಂಡ್ನಿಂದ ಸಂಗೀತ ರಸದೌತಣ
ಕ.ಪ್ರ. ವಾರ್ತೆ ಮೈಸೂರು ಸೆ.6
ನಗರದ ವಿಶ್ವವಿಖ್ಯಾತ ಅರಮನೆ ಆವರಣದಲ್ಲಿ ಭಾರತೀಯ ಸೇನಾ ಬ್ಯಾಂಡ್ ಸಂಗೀತ ಕಾರ್ಯಕ್ರಮ ನಡೆಯಿತು. 80 ಸೇನಾ ವಾದ್ಯಗೋಷ್ಟಿಯವರು ಭಾಗವಹಿಸಿದ್ದರು. ಅರಮನೆಯ ದೀಪಾಲಂಕಾರದ ಜತೆಗೆ ಆಯೋಜಿಸಿದ್ದ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಸೇನಾಪಡೆಯ ಸಂಗೀತಗಾರರು ವೈವಿಧ್ಯಮಯ ಗೀತೆಗಳನ್ನು ನುಡಿಸಿದರು. ಬ್ಯಾಂಡ್ಗಳು ಮತ್ತು ವಾದಕ್ಕೂ ವಿದ್ಯುತ್ ದೀಪ ಅಳವಡಿಸಿದ್ದು ವಿಶೇಷವಾಗಿತ್ತು.
ಈ ಕಾರ್ಯಕ್ರಮ ವೀಕ್ಷಣೆಗಾಗಿ ಸಾರ್ವಜನಿಕರಿಗೆ ಉಚಿತ ವ್ಯವಸ್ಥೆ ಮಾಡಲಾಗಿತ್ತು. ಅರಮನೆಯ ವಿದ್ಯುತ್ ದೀಪಾಲಂಕಾರ ಸವಿಯಲು ಆಗಮಿಸಿದ್ದ ಸ್ಥಳೀಯ ನಾಗರಿಕರು ಮತ್ತು ಪ್ರವಾಸಿಗರು ಈ ಸಂಗೀತದ ರಸದೌತಣವನ್ನೂ ಸವಿದು ಹೋದರು. ಒಂದು ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಪಾಶ್ಚಾತ್ಯ ಮತ್ತು ಹಿಂದೂಸ್ತಾನಿ 11 ಗೀತೆಗಳನ್ನು ನುಡಿಸಿ, ಸಂಗೀತ ರಸಿಕರ ಮನಗೆದ್ದರು. ಕರ್ನಲ್ ಕಿರಣ್ ನೇತೃತ್ವದಲ್ಲಿ ಮೇಜರ್ ಅಶೋಕ್ ಮತ್ತು ನವನೀತ್ ಅವರ ಮೇಲುಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯಿತು. ಕೊನೆಯಲ್ಲಿ ರಾಷ್ಟ್ರಗೀತೆ ನುಡಿಸಲಾಯಿತು.