ಕಣಗಾಲು ಗ್ರಾಪಂ ಜಮಾಬಂದಿ
ಕ.ಪ್ರ. ವಾರ್ತೆ, ಬೈಲಕುಪ್ಪೆ, ಸೆ. 7
ಸಮೀಪದ ಕಣಗಾಲು ಗ್ರಾಪಂ ಆವರಣದಲ್ಲಿ 2012-13ನೇ ಸಾಲಿನ ಜಮಾಬಂದಿ ಕಾರ್ಯಕ್ರಮ ನಡೆಯಿತು.
ಸಬಲೀಕರಣ ಮತ್ತು ಶಾಲೆಗಳ ಬಗ್ಗೆ ಹಾಗೂ ಅಂಗನವಾಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಕುರಿತು ಜಿಪಂ ಯೋಜನಾ ವಿಭಾಗದ ಉಪ ನಿರ್ದೇಶಕ ಮಹದೇವ ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಗ್ರಾಪಂ ವ್ಯಾಪ್ತಿಯ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ಗೌರಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ಶಿವಣ್ಣ, ನಟೇಶ, ವೆಂಕಟೇಶ್, ಗ್ರಾಮಸ್ಥರಾದ ಹನುಮಂತ, ರಾಜೇಗೌಡ, ಮಾದೇವಚಾರಿ, ರಮಣಯ್ಯ ಇದ್ದರು.