ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಗಣೇಶ ಮೂರ್ತಿ ವಿಸರ್ಜನೆಗೆ ಸಂಚಾರಿ ವಾಹನ ವ್ಯವಸ್ಥೆ

Rashmi Kasaragodu
Updated On : 8 Sept 2013, 12:03 pm

ಕ.ಪ್ರ.ವಾರ್ತೆ   ಮೈಸೂರು   ಸೆ. 7
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗಣೇಶ ವಿಗ್ರಹಗಳ ಪರಿಸರ ಸ್ನೇಹಮಹಿ ವಿಸರ್ಜನೆಗಾಗಿ ಸಂಚಾರಿ ವಾಹನಗಳಲ್ಲಿ ನೀರಿನ ಟ್ಯಾಂಕರ್ಗಳ ವ್ಯವಸ್ಥೆ ಮಾಡಿದೆ.
ಈ ಸಂಚಾರಿ ವಾಹನಗಳ ವ್ಯವಸ್ಥೆಯು ಸೆ. 9 ಮತ್ತು 11 ರವರೆಗೆ ಮಾಡಿದೆ. ಸದರಿ ಸಂಚಾರಿ ವಾಹನಗಳ ನಿಲುಗಡೆ ಸ್ಥಳ ಹಾಗೂ ನಿಗದಿತ ಸಮಯ ಕೆಳಕಂಡಂತಿದೆ. ಸಾರ್ವಜನಿತರು ಈ ಅವಕಾಶ ಉಪಯೋಗಿಸಿಕೊಳ್ಳುವಂತೆ ಪರಿಸರ ಅಧಿಕಾರಿ ತಿಳಿಸಿದ್ದಾರೆ.
ವಾಹನ ಸಂಖ್ಯೆ 1- ಸಂಜೆ 4 ರಿಂದ 5.15ರವರೆಗೆ ಮೇಟಗಳ್ಳಿ ಆರಕ್ಷಕ ಠಾಣೆ ಹತ್ತಿರ, ಸಂಜೆ 5.30 ರಿಂದ 6.45- ಕೆ.ಡಿ. ಸರ್ಕಲ್ ಹತ್ತಿರ, ವಿಜಯನಗರ 2ನೇ ಹಂತ, ಸಂಜೆ 7 ರಿಂದ ರಾತ್ರಿ 8.15- ಒಂಡಿಕೊಪ್ಪಲ್ ಚಂದ್ರಮೌಳೇಶ್ವರ ದೇವಸ್ಥಾನ, ಮಾತೃಮಂಡಳಿ ಹತ್ತಿರ, ರಾತ್ರಿ 8.30 ರಿಂದ 10.30ರವರೆಗೆ- ಕುಕ್ಕರಹಳ್ಳಿಕೆರೆ ಮುಖ್ಯದ್ವಾರ.
ವಾಹನ ಸಂಖ್ಯೆ 2- ಸಂಜೆ 4 ರಿಂದ 5.15ರವರೆಗೆ ಯಾದವಗಿರಿ ವಿಕ್ರಮ್ ಆಸ್ಪತ್ರೆ ಹತ್ತಿರ, ಸಂಜೆ 5.30 ರಿಂದ 6.45ರವರೆಗೆ ಶಾಂತಲಾ ಚಿತ್ರ ಮಂದಿರ ಹತ್ತಿರ, ಸಂಜೆ 7 ರಿಂದ ರಾತ್ರಿ 8.15- ಚಾಮುಂಡಿಪುರಂ ವೃತ್ತ, ರಾತ್ರಿ 8.30 ರಿಂದ ರಾತ್ರಿ 10.30ರವರೆಗೆ ಕಾರಂಜಿ ಕೆರೆ ಮುಖ್ಯದ್ವಾರ.
ವಾಹನ ಸಂಖ್ಯೆ 3- ಸಂಜೆ 4 ರಿಂದ 5.15- ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪ, ಕುವೆಂಪುನಗರ, ಸಂಜೆ 5.30 ರಿಂದ 6.45- ಜಯನಗರ ರೇಲ್ವೆ ಗೇಟ್ ಹತ್ತಿರ. ಸಂಜೆ 7 ರಿಂದ ರಾತ್ರಿ 8.15- ಜೆ.ಪಿ. ನಗರ ಗೊಬ್ಬಳಿ ಮರದ ನಿಲ್ದಾಣ, ರಾತ್ರಿ 8.30 ರಿಂದ 10.30ರವರೆಗೆ ಲಿಂಗಾಂಬುದಿ ಮುಖ್ಯದ್ವಾರ (ಶ್ರೀರಾಂಪುರ ಮಾರ್ಗವಾಗಿ).
ಹೆಚ್ಚಿನ ಮಾಹಿತಿಗಾಗಿ ಕೆ. ರವಿಚಂದ್ರ, ಮೊ. 8861346666, ಎಸ್. ರಮೇಶ್- ಮೊ. 9483761660, ಎಚ್.ಆರ್. ಮೋಹನ್ಕುಮಾರ್, ಮೊ. 9972829317, ಎ.ವಿ. ನಾಗರಾಜಶೆಟ್ಟಿ- ಮೊ. 9141768262, ಎ.ಎಂ. ಸಿದ್ದಯ್ಯ, ಮೊ. 9880164745 ಮತ್ತು ಲಕ್ಷ್ಮಣ- ಮೊ. 9845307419.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement