ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ತಹಸೀಲ್ದಾರ್ಗೆ ಬೀಳ್ಕೊಡುಗೆ

Rashmi Kasaragodu
Updated On : 8 Sept 2013, 12:17 pm

ಕ.ಪ್ರ.ವಾರ್ತೆ   ಕೆ.ಆರ್. ನಗರ   ಸೆ. 7
ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಣೆಯಾಗಿರುವ ಬಿ.ಎನ್. ವೀಣಾ ಮತ್ತು ಗ್ರೇಡ್ 2 ತಹಸೀಲ್ದಾರ್ ರಾಮಪ್ರಸಾದ್ ಅವರಿಗೆ ತಾಲೂಕು ಕಚೇರಿ ಸಿಬ್ಬಂದಿ ಅಭಿನಂದಿಸಿ ಬೀಳ್ಕೊಡುಗೆ ನೀಡಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಬಿ.ಎನ್. ವೀಣಾ, ಕಚೇರಿಯ ಸಿಬ್ಬಂದಿ ವರ್ಗ ಸದಾ ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತಿಸಬೇಕು. ಅನಗತ್ಯವಾಗಿ ಅಲೆದಾಡಿಸದೆ ನಿಗದಿತ ಸಮಯದಲ್ಲಿ ಕೆಲಸ ಮಾಡಿಕೊಟ್ಟಾಗ ಮಾತ್ರ ಸರ್ಕಾರಿ ನೌಕರರ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆ ಅಭಿಪ್ರಾಯ ಮೂಡಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬ ಅಧಿಕಾರಿಯು ತಮ್ಮ ಅಧಿಕಾರಾವಧಿಯಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್. ಯದುಗಿರೀಶ್, ನಿರ್ದೇಶಕ ಉದಯಶಂಕರ್, ಉಪ ತಹಸೀಲ್ದಾರ್ ತಿಮ್ಮಯ್ಯ, ಎಂ.ಕೆ. ಮಹದೇವ್, ಆಹಾರ ಇಲಾಖೆಯ ಹನುಮಂತೇಗೌಡ, ಕೃಷ್ಣೇಗೌಡ, ಆರ್ಐ ರಾಜೇಗೌಡ, ಶಿವರಾಮಯ್ಯ, ಪುಟ್ಟರಾಜು, ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement