ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಳೆಯಿಂದ ವಿನಾಯಕ ಉತ್ಸವ

Rashmi Kasaragodu
Updated On : 8 Sept 2013, 12:15 pm

ಮೈಸೂರು: ನಗರದ ಬೃಂದಾವನ ಬಡಾವಣೆಯ ವಿನಾಯಕ ಯುವಕರ ಭಕ್ತ ಮಂಡಳಿ ವತಿಯಿಂದ ಸೆ. 9 ರಿಂದ 12 ರವರೆಗೆ 44ನೇ ವರ್ಷದ ವಿನಾಯಕ ಮಹೋತ್ಸವದ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಸೆ. 9ರ ಬೆಳಗ್ಗೆ 11.30 ರಿಂದ 12.30 ರೊಳಗೆ ವೃಶ್ಚಿಕ ಲಗ್ನದಲ್ಲಿ ವಿನಾಯಕ ಮೂರ್ತಿ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಸಂಜೆ 6 ರಿಂದ 7 ರವರೆಗೆ ಸುಗಮ ಸಂಗೀತ ಸಂಜೆ 7 ರಿಂದ 10 ರವರೆಗೆ ಜಾರ್ಜ್ ಪ್ರಭಾಕರ್ ಮತ್ತು ತಂಡದಿಂದ ಹಲೆಯ ಚನಲಚಿತ್ರ ಗೀತಗಳ ರಸಮಂಜರಿ ಕಾರ್ಯಕ್ರಮ. ಸೆ. 10ರ ಸಂಜೆ 6.30ಕ್ಕೆ ಬಡಾವಣೆಯ ಪುಟ್ಟ ಮಕ್ಕಳಿಂದ ವಿವಿಧ ವಿನೋದಾವಳಿ, ಮನರಂಜನಾ ಕಾರ್ಯಕ್ರಮ. ಸೆ. 11ರ ಸಂಜೆ 6.30ಕ್ಕೆ ಸೋನು ಮೆಲೋಡಿಸ್ ತಂಡದಿಂದ ಸಂಗೀತ ಸಂಜೆ ನಡೆಯಲಿದೆ. ಸೆ. 12ರ ಸಂಜೆ 6.30ಕ್ಕೆ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ವಿನಾಯಕನ ಮೆರವಣಿಗೆ ನಡೆಯಲಿದ್ದು, ನಂತರ ವಿಸರ್ಜಿಸಲಾಗುವುದು.
ಇಬ್ಬರು ನಾಪತ್ತೆ
ಮೈಸೂರು: ಮಹಿಳೆ ಸೇರಿ ಇಬ್ಬರು ನಾಪತ್ತೆಯಾಗಿರುವ ಘಟನೆ ಮೈಸೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಯಡಕೊಳ ನಿವಾಸಿ ಜಯಮ್ಮ ಎಂಬವರ ಪತಿ ಮಹದೇವಸ್ವಾಮಿ ಅ. ರಾಜು (48) ನಾಪತ್ತೆಯಾಗಿದ್ದಾರೆ. ಚಹರೆ- 5.4 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಗಡ್ಡ ಬಿಟ್ಟಿದ್ದಾರೆ. ಕನ್ನಡ, ಉರ್ದು, ಹಿಂದಿ ಮಾತನಾಡುತ್ತಾರೆ. ತಾಲೂಕಿನ ರಮ್ಮನಹಳ್ಳಿ ಕರಿಕಲ್ಲು ಬೀದಿ ನಿವಾಸಿ ಸಂತೋಷ ಎಂಬವರ ಪತ್ನಿ ಸವಿತಾ ಅ. ಜಯಮ್ಮ (25) ಆ.6 ರಿಂದ ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಕನ್ನಡ ಮಾತನಾಡುತ್ತಾರೆ. ಈ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2444955 ಸಂಪರ್ಕಿಸಲು ಮೈಸೂರು ದಕ್ಷಿಣ ಠಾಣೆಯ ಎಸ್ಐ ಪುನೀತ್ ಕೋರಿದ್ದಾರೆ.
ವೃದ್ಧೆ ನಾಪತ್ತೆ
ಮೈಸೂರು: ವಿಜಯನಗರ 2ನೇ ಹಂತ ವಾಣಿವಿಲಾಸ ಲೇಔಟ್ ನಿವಾಸಿ ಕೆ.ಎಚ್. ಹಲಗೇಗೌಡ ಎಂಬವರ ಪತ್ನಿ ಯಶೋಧಮ್ಮ (67) ಸೋಮವಾರ ಜಯಲಕ್ಷ್ಮಿಪುರಂ ವೈದ್ಯರ ಬಳಿ ಆರೋಗ್ಯ ತಪಾಸಣೆಗೆ ಹೋದವರು ನಾಪತ್ತೆಯಾಗಿದ್ದಾರೆ. ಕಾಣೆಯಾಗಿರುವ ತನ್ನ ತಾಯಿಯನ್ನು ಪತ್ತೆ ಮಾಡಿಕೊಡುವಂತೆ ಎಚ್.ಬಿ. ಆಶಾ ಪೊಲೀಸರಿಗೆ ದೂರು ನೀಡಿದ್ದಾರೆ. ಚಹರೆ- 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, ಉಬ್ಬಿನ ಮತ್ತು ಹೆಬ್ಬೆರಳಿನ ಬಳಿ ಹಚ್ಚೆ ಗುರುತಿದೆ. ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418317 ಸಂಪರ್ಕಿಸಲು ವಿಜಯನಗರ ಠಾಣೆ ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement