'ಲೇಖಕನ ಬಂಧನ ಪ್ರಜಾಪ್ರಭುತ್ವ ವಿರೋಧಿ'
ಮೈಸೂರು: ಗಣೇಶನ ಕುರಿತು ಪುಸ್ತಕ ಬರೆದ ಲೇಖಕನ ಬಂಧಿಸಿದ್ದು ಪ್ರಜಾಪ್ರಭುತ್ವದ ವಿರೋಧಿತನ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಚಿಂತಕ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು. ಜೆಎಸ್ಎಸ್ ಮಹಿಳಾ ಕಾಲೇಜು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಹೊರಳು ದಾರಿಯಲ್ಲಿ ಕನ್ನಡ ಸಾಹಿತ್ಯ ಹುಡುಕಾಟದ ಹೊಸ ನೆಲೆಗಳು ಎಂಬ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪದಲ್ಲಿ ಅವರು ಮಾತನಾಡಿದರು. ಯಾವುದೇ ಸಾಹಿತ್ಯಿಕ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ಲೇಖಕನ ಬಂಧಿಸುವುದು ಪ್ರಜಾಸತ್ತಾತ್ಮಕ ವಿರೋಧಿ ಕೆಲಸ. ಅಂದಿನ ಬಿಜೆಪಿ ಸರ್ಕಾರ ಇಂತಹ ಯಾವುದೇ ವಿಷಯಕ್ಕೆ ಯಾರನ್ನು ಬಂಧಿಸಿದ ಉದಾಹರಣೆಯಿಲ್ಲ. ಆದರೆ ಯೋಗೇಶ್ ಮಾಸ್ಟರ್ ಬಂಧನ ಪ್ರಜಾಪ್ರಭುತ್ವದ ವಿರೋಧಿತನ ಎಂದರು.