ವಿಭಾಗೀಯ ಮಟ್ಟಕ್ಕೆ ಆಯ್ಕೆ
ಕೆ.ಆರ್. ನಗರ: ಜಿಲ್ಲಾ ಮಟ್ಟದ ಬಾಲಕಿಯರ ಕಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕಿನ ಕೆಡಗ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರು ದ್ವಿತೀಯ ಸ್ಥಾನ ಗಳಿಸುವ ಮೂಲಕ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಕೆ.ಎಂ. ಪಲ್ಲವಿ, ಜಿ.ಎಸ್. ಪ್ರಿಯಾಂಕ, ಅನಿತ, ಜಿ.ಎಸ್. ಹರ್ಷಿತಾ, ಶ್ವೇತ ಅವರನ್ನು ಶಾಲೆಯ ಮುಖ್ಯ ಶಿಕ್ಷಕ ಡಿ. ಪುಟ್ಟರಾಜು ಅಭಿನಂದಿಸಿದ್ದಾರೆ.