ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಸದ್ಗುಣಕ್ಕೆ ಶಿಕ್ಷಣ ಸಹಕಾರಿ: ಮುಕ್ತಿದಾನಂದಜಿ

Rashmi Kasaragodu
Updated On : 8 Sept 2013, 12:11 pm

ಕ.ಪ್ರ.ವಾರ್ತೆ   ಮೈಸೂರು   ಸೆ. 7
ವ್ಯಕ್ತಿಯ ಸದ್ಗುಣಕ್ಕೆ ಶಿಕ್ಷಣ ಸಹಕಾರಿ ಎಂದು ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಾದಾನಂದಜಿ ಹೇಳಿದರು.
ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ 2013- 14ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಜೀವನಕ್ಕೆ ಉತ್ತಮ ಗಾಳಿ, ನೀರು ಹಾಗೂ ಪರಿಸರ ಅವಶ್ಯಕವಾಗಿರುವಂತೆ, ಬದುಕಿನ ಯಶಸ್ಸಿಗೆ ಉತ್ತಮ ಮಾನಸಿಕ ಸ್ಥಿತಿಯೂ ಬಹುಮುಖ್ಯ. ಮನಸ್ಸಿನಲ್ಲಿ ಯಾವುದೇ ಕಲ್ಮಶವಿಲ್ಲದೆ ಸದ್ಗುಣ ಬೆಳೆಸಿಕೊಳ್ಳಬೇಕಾದರೆ ಅದಕ್ಕೆ ಶಿಕ್ಷಣ ಬಹುಮುಖ್ಯವಾದ ಮಾರ್ಗ ಎಂದರು.
ಯುವಜನತೆ ಕೇವಲ ಕ್ಷಣಿಕ ಸುಖಕ್ಕಾಗಿ ಹಾತೊರೆಯದೆ, ರಾಷ್ಟ್ರ ಕಟ್ಟುವಲ್ಲಿ ಸಹಾಯಕವಾಗುವ ಶಾಶ್ವತ ಕೆಲಸ ಮಾಡಬೇಕು. ಪ್ರಾಮಾಣಿಕ ಹಾಗೂ ಸೌರ್ಹಾದತೆಯಿಂದ ಕೈಜೋಡಿಸಿದಾಗ ದೇಶದ ಪ್ರಗತಿ ಸಾಧ್ಯವಾಗಲಿದೆ. ಮೊಬೈಲ್, ಬೈಕ್ ಎಂದು ಕಾಲಹರಣ ಮಾಡದೆ, ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮುಂದಾಗಬೇಕು. ಇದಕ್ಕಾಗಿ ಆಧ್ಯಾತ್ಮಿಕ ಹಾಗೂ ನೈತಿಕ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಗುಂಡಪ್ಪಗೌಡ, ವಕೀಲರು ವೃತ್ತಿ ಘನತೆ ಎತ್ತಿ ಹಿಡಿಯುವ ಮೂಲಕ ಕರ್ತವ್ಯ ನಿರ್ವಹಿಸಿ ಅನ್ಯಾಯಕ್ಕೆ ಒಳಗಾದವರಿಗೆ ಪ್ರಾಮಾಣಿಕವಾಗಿ ನ್ಯಾಯ ಕೊಡಿಸುವಲ್ಲಿ ಸ್ಪಂದಿಸಬೇಕು ಎಂದರು.
ಕಾವೇರಿ ನೀರಾವರಿ ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ಡಿ. ರವಿಕುಮಾರ್, ಸಂಸ್ಥೆ ಗೌರವ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ. ವಿಶ್ವನಾಥ್, ಖಜಾಂಚಿ ಎಸ್.ಎನ್. ಲಕ್ಷ್ಮೀನಾರಾಯಣ ಅವರು ಮುಖ್ಯ ಅತಿಥಿಯಾಗಿದ್ದರು. ಪ್ರಾಂಶುಪಾಲ ಪ್ರೊ. ಕೆ.ಬಿ. ವಾಸುದೇವ, ವಿದ್ಯಾರ್ಥಿ ಸಲಹೆಗಾರ ಎಸ್.ಬಿ. ಬೋರೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement