ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

11 ರಿಂದ ಪುಸ್ತಕ ವಿತರಣೆ

Rashmi Kasaragodu
Updated On : 8 Sept 2013, 10:53 am

ಮೈಸೂರು: ಮೈಸೂರಿನ ವೆಂಕಟಗಿರಿ ಪ್ರಕಾಶನ, ಹಿರಣ್ಮಯಿ ಪ್ರತಿಷ್ಠಾನವು ಎಂಸಿಡಿಸಿಸಿ ಬ್ಯಾಂಕ್ ಉಚಿತವಾಗಿ ನೀಡಿರುವ ಕನ್ನಡ ವ್ಯಾಕರಣ ಪರಿಚಯ ಮತ್ತು ಕನ್ನಡ ಛಂದಸ್ಸಿನ ಪ್ರವೇಶಿಕೆ ಕೃತಿಗಳನ್ನು ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೆ.11 ರಿಂದ ವಿತರಣೆ ಸಮಾರಂಭ ಆಯೋಜಿಸಿದೆ. ಸೆ.11ರ ಬೆಳಗ್ಗೆ 10.30ಕ್ಕೆ ಮೈಸೂರು ತಾಲೂಕು ಚಾಮುಂಡಿಬೆಟ್ಟ, ಮಧ್ಯಾಹ್ನ 2ಕ್ಕೆ ಎಚ್.ಡಿ. ಕೋಟೆ ತಾಲೂಕಿನ ಕ್ಯಾತನಹಳ್ಳಿ, ಸೆ.12ರ ಬೆಳಗ್ಗೆ 11ಕ್ಕೆ ನಂಜನಗೂಡು ತಾಲೂಕು ಕಳಲೆ ಹಾಗೂ ಸೆ.14ರ ಬೆಳಗ್ಗೆ 9.30ಕ್ಕೆ ಟಿ. ನರಸೀಪುರ ತಾಲೂಕು ತಲಕಾಡಿನಲ್ಲಿ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ವೆಂಕಟಗಿರಿ ಪ್ರಕಾಶನದ ಪ್ರೊ.ನೀ. ಗಿರಿಗೌಡ, ಹಿರಣ್ಮಯಿ ಪ್ರತಿಷ್ಠಾನದ ಎ. ಸಂಗಪ್ಪ ತಿಳಿಸಿದ್ದಾರೆ.
ಬ್ಯೂಟಿಫುಲ್ ಕಿಡ್ ಪ್ರಶಸ್ತಿ
ಮೈಸೂರು: ಮೀಡಿಯಾ ಮಾಹಿತಿ ವತಿಯಿಂದ 10 ವರ್ಷದೊಳಗಿನ ಮಕ್ಕಳಿಗೆ ಮೈಸೂರು ಬ್ಯೂಟಿಫುಲ್ ಕಿಡ್ ಪ್ರಶಸ್ತಿ ಸ್ಪರ್ಧೆ ನಡೆಯಲಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಿದೆ. 10 ವಿಭಾಗವಾಗಿ ವಿಂಗಡಿಸಿ ಪ್ರಶಸ್ತಿ ನೀಡಲಾಗುತ್ತದೆ. ಆಸಕ್ತರು ಸೆ.10 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 92420 49921, 98444 81545 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement