ಆರ್ವತಿ ಸಹಕಾರ ಸಂಘಕ್ಕೆ ಆಯ್ಕೆ
ಬೈಲುಕುಪ್ಪೆ: ಇಲ್ಲಿಗೆ ಸಮೀಪದ ಆವರ್ತಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ 9 ಮಂದಿ ಮಾತ್ರ ಸ್ಪರ್ಧಿಸಿದ್ದರು. ಎರಡು ಕ್ಷೇತ್ರ ಮೀಸಲಾತಿ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಇಲ್ಲದ ಕಾರಣ, ಕೇವಲ 9 ಸದಸ್ಯರು ಆಯ್ಕೆಯಾಗಿದರು. ಅಧ್ಯಕ್ಷರಾಗಿ ಆಯ್ಕೆಯಾದ ಎ.ಎಂ. ಧರ್ಮ ಮಾತನಾಡಿದರು. ಗ್ರಾಪಂ ಸದಸ್ಯ ಎ.ಎಸ್. ಚಂದ್ರಶೇಖರ್, ಎ.ಸಿ. ಚಂದ್ರಶೇಖರ್, ಗುರುಮಲ್ಲೇಶ್, ಎ.ಎಂ. ಧರ್ಮ, ಎ.ವಿ. ಮಹೇಶ್ ಇದ್ದರು.
ರಾಜೇಂದ್ರ ಸ್ವಾಮೀಜಿ ಜಯಂತಿ
ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 98ನೇ ಜಯಂತಿಯನ್ನು ಸೆ.11ರ ಸಂಜೆ 4ಕ್ಕೆ ಎಸ್ಜೆಸಿಇಆವರಣದಲ್ಲಿ ಆಯೋಜಿಸಿದ್ದು, ನಿವೃತ್ತ ಡಿಜಿಪಿ ಎಲ್. ರೇವಣ್ಣಸಿದ್ದಯ್ಯ ಭಾಗವಹಿಸುವರು.
ಅಪರಿಚಿತ ಶವ ಪತ್ತೆ
ಟಿ. ನರಸೀಪುರ: ಇಲ್ಲಿನ ರೇಷ್ಮೆ ಮಾರುಕಟ್ಟೆ ಮುಂಭಾಗ ಸುಮಾರು 30 ರಿಂದ 35 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಆಕೆ ಹಸಿವು ಹಾಗೂ ಕಾಯಿಲೆಯಿಂದ ಮೃತಪಟ್ಟಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಮೃತ ಮಹಿಳೆಯ ಹೆಸರು ವಿಳಾಸ ಪತ್ತೆಯಾಗಿಲ್ಲ. ದುಂಡು ಮುಖ, ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು, ಮಹಿಳೆಯ ಬಲಗೈನಲ್ಲಿ ಜಮಲ ಎಂಬ ಹಚ್ಚೆ ಇದ್ದು, ಹಸಿರು ರವಿಕೆ, ನೇರಳೆ ಬಣ್ಣದ ಸೀರೆ ಧರಿಸಿದ್ದಾಳೆ. ವಾರಸುದಾರರು ಯಾರಾದರೂ ಇದ್ದಲ್ಲಿ, ಈಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ನರಸೀಪುರ ಪೊಲೀಸ್ ಠಾಣೆ, ದೂ. 08227-260990 ಸಂಪರ್ಕಿಸಬಹುದು.
ಕಿಡ್ ಪ್ರಶಸ್ತಿ
ಮೈಸೂರು: ಮೀಡಿಯಾ ಮಾಹಿತಿ ವತಿಯಿಂದ 10 ವರ್ಷದೊಳಗಿನ ಮಕ್ಕಳಿಗೆ ಮೈಸೂರು ಬ್ಯೂಟಿಫುಲ್ ಕಿಡ್ ಪ್ರಶಸ್ತಿ ಸ್ಪರ್ಧೆ ನಡೆಯಲಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಿದೆ. 10 ವಿಭಾಗವಾಗಿ ವಿಂಗಡಿಸಿ ಪ್ರಶಸ್ತಿ ನೀಡಲಾಗುತ್ತದೆ. ಆಸಕ್ತರು ಸೆ.10 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 92420 49921, 98444 81545 ಸಂಪರ್ಕಿಸಬಹುದು.