ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಐವರು ಕೊಲೆ ಆರೋಪಿಗಳ ಸೆರೆ

Rashmi Kasaragodu
Updated On : 8 Sept 2013, 10:55 am

ಕೆ.ಆರ್. ನಗರ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೆ.ಆರ್. ಪೇಟೆ ಪಟ್ಟಣದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಪರಾರಿಯಾಗುತ್ತಿದ್ದ ಐವರು ಆರೋಪಿಗಳನ್ನು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಹಂಪಾಪುರದಲ್ಲಿ ಬಂಧಿಸಲಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆಯ ಟೀ ಅಂಗಡಿಯ ಬಳಿ ನಿಂತಿದ್ದ ಭಾಸ್ಕರ (30) ಎಂಬಾತನನ್ನು ವೆಂಕಟೇಶ್, ಕೌಶಿಕ್, ಮಹದೇವ, ಅರುಣ ಮತ್ತು ಶ್ರೀಧರ ಎಂಬವರು ಭಾನುವಾರ ಬೆಳಗ್ಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಕೊಲೆ ಮಾಡಿ ಆರೋಪಿಗಳು ಪರಾರಿಯಾಗುತ್ತಿರುವ ಮಾಹಿತಿ ಹಿನ್ನೆಲೆಯಲ್ಲಿ ಕೆ.ಆರ್. ನಗರ ಠಾಣೆ ಎಸ್ಐ ವನರಾಜು, ಎಎಸ್ಐ ರಾಚಪ್ಪ ಮತ್ತು ಸಿಬ್ಬಂದಿ ಪರಶುರಾಮ್, ಮಂಜುನಾಥ್ ಅವರು ಗಸ್ತಿನಲ್ಲಿದ್ದರು.
ಹಂಪಾಪುರ ಬಳಿ ಪೊಲೀಸರನ್ನು ಕಂಡು ಮಹದೇವ, ಅರುಣ ಮತ್ತು ಶ್ರೀಧರ ಎಂಬವರು ಹೊಸ ಟಾಟಾ ಎಸಿ ಟೆಂಪೋದಲ್ಲಿ ಪರಾರಿಯಾಗಲು ಪ್ರಯತ್ನಿಸಿದ್ದಾಗ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಮೊಬೈಲ್ನಿಂದ ಸಂಪರ್ಕಿಸಿ ಉಳಿದ ಆರೋಪಿಗಳಾದ ವೆಂಕಟೇಶ ಮತ್ತು ಕೌಶಿಕ್ನನ್ನು ಹುಣಸೂರು ತಾಲೂಕಿನ ಹೊಸರಾಮೇನಹಳ್ಳಿ ಬಳಿ ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement