ತರಬೇತಿಗೆ ಅರ್ಜಿ
ನವೋದಯ ಫೌಂಡೇಷನ್ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ನಡೆಯಲಿರುವ ಐಬಿಪಿಎಸ್ ಪರೀಕ್ಷೆ, ರಾಷ್ಟ್ರೀಕೃತ ಬ್ಯಾಂಕುಗಳ ಪ್ರೊಬೇಷನರಿ ಮತ್ತು ಕ್ಲರ್ಕ್ ಹುದ್ದೆಗೆ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ. ಆಸಕ್ತರು ಸೆ.10 ರೊಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ಮೊ. 97418 69722, 99162 53406 ಸಂಪರ್ಕಿಸಬಹುದು.
ಉಚಿತ ತರಬೇತಿ
ಎಸ್ಜೆಸಿಇ ಕಾಲೇಜಿನ ಸ್ಟೆಪ್ ಹಾಗೂ ಸ್ಫೂರ್ತಿ ಜನಾಭಿವೃದ್ಧಿ ಸಂಸ್ಥೆಯು ಸೆ.12 ರಿಂದ ಆಹಾರ ಸಂಸ್ಕರಣೆ ಮತ್ತು ಪೌಷ್ಟಿಕ ಆಹಾರ ಉತ್ಪನ್ನಗಳಿಗೆ ಸಂಬಂಧಿಸಿದಂತೆ 6 ವಾರಗಳ ಉದ್ಯಮಶೀಲತಾ ಉಚಿತ ತರಬೇತಿ ಆಯೋಜಿಸಿದೆ. 18 ವರ್ಷ ಮೇಲ್ಪಟ್ಟ ಪದವೀಧರರು, ಡಿಪ್ಲೊಮಾ, ಐಟಿಐ ಓದಿರುವ ಪುರುಷರು, ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಲು ಅರ್ಹರು. ಆಸಕ್ತರು ಸೆ.11 ರೊಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗಾಗಿ ಮೊ. 81238 70797, 99015 26736 ಸಂಪರ್ಕಿಸಬಹುದು.
ರಾಜೇಂದ್ರ ಸ್ವಾಮೀಜಿ ಜಯಂತಿ
ಜೆಎಸ್ಎಸ್ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 98ನೇ ಜಯಂತಿಯನ್ನು ಸೆ.11ರ ಸಂಜೆ 4ಕ್ಕೆ ಎಸ್ಜೆಸಿಇಆವರಣದಲ್ಲಿ ಆಯೋಜಿಸಿದ್ದು, ನಿವೃತ್ತ ಡಿಜಿಪಿ ಎಲ್. ರೇವಣ್ಣಸಿದ್ದಯ್ಯ, ಹೈಕ್ಯಾಲ್ ಟೆಕ್ನಾಲಜೀಸ್ ಅಧ್ಯಕ್ಷ ಎಂ.ಎಸ್. ಶಶಿಕಿರಣ್, ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿ ಅತಿಥಿಗಳಾಗಿ ಭಾಗವಹಿಸುವರು.
ಅನಿಲ ಸಂಪರ್ಕ ಪಡೆಯಲು ಸೂಚನೆ
ಮೈಸೂರು: ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶದ ಅನಿಲರಹಿತ ಎಪಿಎಲ್ ಗ್ರಾಹಕರಿಗೆ ಸೀಮೆಎಣ್ಣೆ ಸ್ಥಗಿತಗೊಳಿಸುತ್ತಿರುವುದರಿಂದ ಕೂಡಲೆ ಅನಿಲ ಸಂಪರ್ಕ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಸಿ. ಶಿಖಾ ಸೂಚಿಸಿದ್ದಾರೆ. ಜಿಲ್ಲೆಯ ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ಒಟ್ಟು 16,525, ಗ್ರಾಮೀಣ ಪ್ರದೇಶದ 46,428 ಮಂದಿ ಅನಿಲ ಸಂಪರ್ಕ ಹೊಂದಿಲ್ಲ ಎಂದು ಸೀಮೆಎಣ್ಣೆ ಖರೀದಿಸುತ್ತಿದ್ದಾರೆ. ಈ ಎಲ್ಲಾ ಪಡಿತರ ಚೀಟಿ ಪರಿಶೀಲನೆ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಅಲ್ಲದೆ, ನಗರ ಮತ್ತು ಪಟ್ಟಣ ಪ್ರದೇಶದ ಅನಿಲರಹಿತ ಎಪಿಎಲ್ ಪಡಿತರ ಚೀಟಿದಾರರಿಗೆ ಸೆಪ್ಟೆಂಬರ್ ತಿಂಗಳಿಂದಲೆ ಸೀಮೆಎಣ್ಣೆ ವಿತರಣೆ ನಿಲ್ಲಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ಎಪಿಎಲ್ ಪಡಿತರ ಚೀಟಿದಾರರಿಗೆ ಅಕ್ಟೋಬರ್ನಿಂದ ಸೀಮೆಎಣ್ಣೆ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.