ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂಗಡಿಯ ಮುಂಭಾಗದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Rashmi Kasaragodu
Updated On : 11 Sept 2013, 1:12 am

ಟಿ. ನರಸೀಪುರ: ಪಟ್ಟಣದ ಕಾಲೇಜು ರಸ್ತೆಯ ಅಂಗಡಿಯೊಂದರ ಮುಂಭಾಗ ಅಪರಿಚಿತ ವ್ಯಕ್ತಿಯ ಶವ ಸೋಮವಾರ ಪತ್ತೆಯಾಗಿದೆ. ಹರಿಯುತ್ತಿದ್ದ ರಕ್ತದ ಮಡುವಿನಲ್ಲಿ ಸುಮಾರು 30 ರಿಂದ 35ರ ವಯಸ್ಸಿನ ವ್ಯಕ್ತಿ ಶವ ಪತ್ತೆಯಾಗಿದೆ. ತಲೆಯ ಹಿಂಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದಿದ್ದು, ಮೈ ಕೈಗಳಲ್ಲಿ ತೆರಚಿದ ಗಾಯಗಳಾಗಿವೆ. ಯಾರೋ ಮೋಟಾರ್ ಬೈಕ್ನ ಸವಾರ ಮೃತ ಅಪರಿಚಿತ ವ್ಯಕ್ತಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಅತೀ ವೇಗವಾಗಿ ಚಾಲನೆ ಮಾಡಿದ ಪರಿಣಾಮದ ಆತ ಬೈಕ್ನಿಂದ ಬಿದ್ದು ಸಾವಿಗೀಡಾಗಿರಬಹುದು. ಬೈಕ್ ಸವಾರ ಕೃತ್ಯವನ್ನು ಮರೆಮಾಚಲು ಅಂಗಡಿ ಮುಂಭಾಗ ಮೃತನನ್ನು ಮಲಗಿಸಿ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement