ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂತರ ಕಾಲೇಜು ಸ್ಪರ್ಧೆ: ನಾಳೆಯಿಂದ ತಂಡ ಆಯ್ಕೆ

Rashmi Kasaragodu
Updated On : 11 Sept 2013, 1:15 am

ಮೈಸೂರು: ಮೈಸೂರು ವಿವಿ ವ್ಯಾಪ್ತಿಯ ಅಂತರ ಕಾಲೇಜುಗಳ ಹಾಗೂ ವಿಶ್ವವಿದ್ಯಾಲಯ ತಂಡಗಳ ಆಯ್ಕೆ ಸ್ಪರ್ಧೆಯು ಸೆ. 12 ರಿಂದ 14 ರವರೆಗೆ ನಡೆಯಲಿದೆ. ಜಿಮ್ನಾಸ್ಟಿಕ್ಸ್, ಈಜು, ಯೋಗಾಸನ, ಕುಸ್ತಿ, ಭಾರ ಎತ್ತುವ ಹಾಗೂ ಅತ್ಯುತ್ತಮ ದೇಹದಾರ್ಢ್ಯ ತಂಡಗಳ ಆಯ್ಕೆ ಸ್ಪರ್ಧೆಗಳು ಮೈಸೂರು ವಿವಿ ಜಿಮ್ನೇಶಿಯಂ ಹಾಲ್ ಮತ್ತು ಜ್ಞಾನ ಸರೋವರ ಅಂತಾರಾಷ್ಟ್ರೀಯ ವಸತಿ ಶಾಲೆಯ ಈಜುಗೊಳದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸ್ಪರ್ಧೆಗಳಿಗೆ ಈಗಾಗಲೆ ಮೈಸೂರು ವಿವಿ ವ್ಯಾಪ್ತಿಯ ಸುಮಾರು 60 ಕಾಲೇಜುಗಳಿಂದ 500ಕ್ಕೂ ಹೆಚ್ಚು ಪುರುಷ, ಮಹಿಳಾ ಕ್ರೀಡಾಪಟುಗಳು ಪ್ರವೇಶ ಸ್ವೀಕರಿಸಲಾಗಿದೆ. ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಪ್ರವೇಶಾವಕಾಶ ಕಳುಹಿಸಿರುವ ಎಲ್ಲಾ ಕುಸ್ತಿಪಟುಗಳು ಸೆ.12 ರಂದು ಜಿಮ್ನೇಶಿಯಂ ಹಾಲ್ ಮುಂದೆ ಬೆಳಗ್ಗೆ 7.30ಕ್ಕೆ ದೇಹದ ತೂಕ ನೀಡಲು ಹಾಜರಿರಬೇಕು. ಉಳಿದ ಎಲ್ಲಾ ಕ್ರೀಡಾ ಚಟುವಟಿಕೆಗೆ ಅಂದು ಬೆಳಗ್ಗೆ 8.30ಕ್ಕೆ ಜಿಮ್ನೇಶಿಯಂ ಹಾಲ್ನಲ್ಲಿ ಇರಬೇಕು. ಅಂದು ಬೆಳಗ್ಗೆ 9ಕ್ಕೆ ಸ್ನಾತಕೋತ್ತರ ಕ್ರೀಡಾ ಮಂಡಳಿ ಅಧ್ಯಕ್ಷ ಪ್ರೊ.ಬಿ.ಎಸ್. ವಿಶ್ವನಾಥ್ ಸ್ಪರ್ಧೆ ಉದ್ಘಾಟಿಸುವರು. ಸೆ.13ರ ಬೆಳಗ್ಗೆ 10.15ಕ್ಕೆ ಗಂಗೋತ್ರಿಯ ಬಹದ್ದೂರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಸಭಾಂಗಣದಲ್ಲಿ  ಕೆ.ಆರ್. ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಬಿ.ಜಿ. ಸಾಗರ್ ಮಾತನಾಡುವರು. ದೈಹಿಕ ಶಿಕ್ಷಣ ಮತ್ತು ಕ್ರೀಡೆ ದತ್ತಿ ಉಪನ್ಯಾಸವನ್ನು ಪ್ರೊ.ಶೇಷಣ್ಣ ನೀಡುವರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸುವರು ಎಂದು ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ.ಕೃಷ್ಣ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement