ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಣ್ಣನನ್ನು ಕೊಂದ ತಮ್ಮನಿಗೆ ಜೀವಾವಧಿ ಶಿಕ್ಷೆ

Rashmi Kasaragodu
Updated On : 11 Sept 2013, 1:15 am

ಮೈಸೂರು: ಕ್ಷುಲ್ಲಕ ಕಾರಣಕ್ಕಾಗಿ ಅಣ್ಣನನ್ನು ಕೊಲೆ ಮಾಡಿದ ತಮ್ಮನಿಗೆ ಮೈಸೂರಿನ ನ್ಯಾಯಾಲಯವು ಜೀವಾವಧಿ ಕಠಿಣ ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.
ನಂಜನಗೂಡು ನಿವಾಸಿ ರೇಣುಕುಮಾರ ಶಿಕ್ಷೆಗೆ ಗುರಿಯಾದವನು. ಈತ ತನ್ನ ಅಣ್ಣ ಮಂಜುನಾಥನನ್ನು ಕೊಲೆ ಮಾಡಿದ್ದ. ಕೊಲೆಯಾದ ಮಂಜುನಾಥ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಕುಡಿದು ಬಂದು ತಂದೆ, ತಾಯಿ ಮತ್ತು ತಮ್ಮನೊಂದಿಗೆ ಗಲಾಟೆ ಮಾಡುತ್ತಿದ್ದ. ತಾಯಿ ಚೀಟಿ ಹಾಕಿದ್ದು, ಆ ಹಣದಲ್ಲಿ ರೇಣುಕುಮಾರಗೆ ಆಟೋ ತೆಗೆದುಕೊಡುವುದಾಗಿ ತಿಳಿಸಿದ್ದರು. ಆದರೆ, ಅದೇ ಚೀಟಿ ಹಣದಲ್ಲಿ ಮಂಜುನಾಥನಿಗೆ ಬೇರೆ ಮನೆಯನ್ನು ಭೋಗ್ಯ ಮಾಡಿಕೊಟ್ಟಿದ್ದರು.
ಮಂಜುನಾಥ ಬದುಕಿದ್ದರೆ ತನಗೆ ತೊಂದರೆಯಾಗುತ್ತದೆಂದು ತಿಳಿದ ರೇಣುಕುಮಾರ, 2011ರ ಸೆ.14 ರಂದು ಆಟೋ ಓಡಿಸಲು ಹೋಗುತ್ತಿದ್ದ ಮಂಜುನಾಥನನ್ನು ಮನೆಯಲ್ಲಿ ಗ್ಯಾಸ್ ಮುಗಿದಿದೆ, ಬುಕ್ ಮಾಡಿ ಬರೋಣ ಬಾ ಎಂದು ಕರೆದುಕೊಂಡು ಹೋಗಿದ್ದ. ನಂಜನಗೂಡು ಹುಲ್ಲಹಳ್ಳಿ ನಾಲೆ ಸಮೀಪ ಎಂಜಿಎಸ್ ರಸ್ತೆಯ ಬಳಿ ಚಾಕುವಿನಿಂದ ಮಂಜುನಾಥ ಎದೆ, ಹೊಟ್ಟೆ ಹಾಗೂ ಇತರೆ ಕಡೆಗಳಲ್ಲಿ ತಿವಿದು ಕೊಲೆ ಮಾಡಿದ್ದ.
ಈ ಸಂಬಂಧ ನಂಜನಗೂಡು ಪಟ್ಟಣ ಠಾಣೆ ಪೊಲೀಸರು ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement