ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಇಂದಿನಿಂದ ಕರುಳು- ಜಠರ ತಪಾಸಣೆ

Rashmi Kasaragodu
Updated On : 11 Sept 2013, 1:11 am

ಮೈಸೂರು: ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯು ಸೆ.11 ರಿಂದ 14ರ ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ಜಠರ- ಕರುಳಿನ ತಪಾಸಣೆ ಶಿಬಿರ ಆಯೋಜಿಸಿದೆ. ದೂ. 3989896 ಸಂಪರ್ಕಿಸಬಹುದು.
ಕೀಚಕ ವಧೆ ಯಕ್ಷಗಾನ
ಭಾರತೀಯ ವಿದ್ಯಾಭವನವು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಕೀಚಕ ವಧೆ- ಯಕ್ಷಗಾನ ಪ್ರಸಂಗವನ್ನು ಸೆ.12ರ ಸಂಜೆ 6ಕ್ಕೆ ವಿದ್ಯಾಭವನ ಆವರಣದಲ್ಲಿ ಏರ್ಪಡಿಸಿದೆ. ವಿದ್ಯಾಭವನದ ಅಧ್ಯಕ್ಷ ಎನ್. ರಾಮಾನುಜ ಉದ್ಘಾಟಿಸುವರು. ಮೈಸೂರು ಘಟಕದ ಅಧ್ಯಕ್ಷ ಪ್ರೊ.ಎ.ವಿ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸುವರು. ಗೌರವ ಕಾರ್ಯದರ್ಶಿ ಪಿ.ಎಸ್. ಗಣಪತಿ ಮತ್ತು ಗೌರವ ಖಜಾಂಚಿ ಡಾ.ಎ.ಟಿ. ಭಾಷ್ಯಂ ಇರುವರು.
ದೇವರ ನಾಮ ಗಾಯನ
ಸುಬ್ಬರಾಯನಕೆರೆ ಶ್ರೀ ರಾಘವೇಂದ್ರಸ್ವಾಮಿಗಳ ಬೃಂದಾವನ ಸನ್ನಿಧಾನವು ಸೆ.12ರ ಸಂಜೆ 7.30ಕ್ಕೆ ವಿದುಷಿ ರಾಜಲಕ್ಷ್ಮಿ ವಿಜಯಕುಮಾರ್ ಮತ್ತು ವೃಂದದವರಿಂದ ಭಕ್ತಿಗೀತೆ, ದೇವರನಾಮ ಗಾಯನ ಕಾರ್ಯಕ್ರಮ ಏರ್ಪಡಿಸಿದೆ.
ಅರ್ಚನ ಬೆನ್ನೂರ್ ಗಾಯನ
ಕುವೆಂಪುನಗರದ ಗಾನಭಾರತಿಯು ವೀಣೆಶೇಷಣ್ಣ ಭವನದಲ್ಲಿ ಸೆ.13ರ ಸಂಜೆ 6ಕ್ಕೆ ವಿದುಷಿ ಅರ್ಚನ ಬೆನ್ನೂರ್ ಅವರ ಗಾಯನ ಕಾರ್ಯಕ್ರಮ ಆಯೋಜಿಸಿದೆ. ವಿದ್ವಾನ್ ವೆಂಕಟೇಶ್ ಪಿಟೀಲು, ಪಿ.ಎಸ್. ಶ್ರೀಧರ್ ಮೃದಂಗ ಮತ್ತು ಎಸ್. ಮಂಜುನಾಥ್ ಘಟಂ ಸಹಕಾರ ನೀಡುವರು.
ತಿಂಗಳ ಉಪನ್ಯಾಸ
ಮೈಸೂರು ಸೈನ್ಸ್ ಫೌಂಡೇಷನ್ ತಿಂಗಳ ಉಪನ್ಯಾಸ ಕಾರ್ಯಕ್ರಮದಡಿ ಸೆ.12ರ ಸಂಜೆ 5.30ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಪ್ರಕೃತಿಯ ಹಾರುವ ಆಭರಣಗಳು- ಪಕ್ಷಿಗಳು ಕುರಿತು ಉಪನ್ಯಾಸ ಏರ್ಪಡಿಸಿದೆ. ವಿಜ್ಞಾನಿ ಡಾ.ಹರೀಶ್ ಆರ್. ಭಟ್ ಉಪನ್ಯಾಸ ನೀಡುವರು ಎಂದು ಸಂಸ್ಥೆ ಕಾರ್ಯದರ್ಶಿ ಜಿ.ಬಿ. ಸಂತೋಷ್ಕುಮಾರ್ ತಿಳಿಸಿದ್ದಾರೆ.
ಪ್ರತಿಭಾ ಪುರಸ್ಕಾರ
ಕೊಡಗು ಗೌಡ ಸಮಾಜವು ಸೆ.15 ರಂದು ಕೈಲ್ ಮುಹೂರ್ತ ಅಂಗವಾಗಿ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ. ಮಾಹಿತಿಗೆ ಮೊ. 9448600173 ಅಥವಾ 9480443039 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement