ಕೊರಿಯರ್ ಸೇವಾ ಸಮಸ್ಯೆಗೆ ಕಾನೂನು ಪರಿಹಾರ
ಕ.ಪ್ರ. ವಾರ್ತೆ ಮೈಸೂರು ಸೆ.10
ಕೊರಿಯರ್ ಉದ್ಯಮವು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸೇವಾ ಕ್ಷೇತ್ರವಾಗಿದ್ದು, ಇಲ್ಲಿ ಸಮಸ್ಯೆಗಳು ಏನಾದರು ಉದ್ಭವಿಸಿದರೆ ಕಾನೂನು ಪರಿಹಾರ ಪಡೆಯಬಹುದಾಗಿದೆ ಎಂದು ಮೈಸೂರು ಗ್ರಾಹಕರ ಪರಿಷತ್ ಅಭಿಪ್ರಾಯಪಟ್ಟಿದೆ.
ಭಾರತೀಯ ಅಂಚೆ ಕಚೇರಿ ಅಧಿನಿಯವು ಖಾಸಗಿ ಕೊರಿಯರ್ ಸೇವೆಗಳನ್ನು ಪ್ರತಿಬಂಧಿಸಿದ್ದರೂ, ಭಾರತದ ಸಂಸತ್ತು ಖಾಸಗಿ ಕೊರಿಯರ್ ಸೇವೆಗಳನ್ನು ಸ್ಪಷ್ಟವಾಗಿ ವ್ಯಾಪಿಸಿರುವ 2007ರ ರಸ್ತೆ ಸಾಗಣೆ ಅಧಿನಿಯಮ ಎಂಬ ಕಾನೂನನ್ನು ಜಾರಿಗೆ ತಂದಿದೆ. ಕೊರಿಯರ್ ನಿರ್ಲಕ್ಷ್ಯದಿಂದ ಅವರ ಮೂಲಕ ಕಳಿಸಲ್ಪಟ್ಟ ಯಾವುದೇ ಪತ್ರ ಅಥವಾ ಸರಕು ಕಳೆದು ಹೋದರೆ, ಹಾನಿಗೀಡಾದರೆ ಅಥವಾ ವಿಲೇವಾರಿಯಾಗದಿದ್ದರೆ ಅಂತಹ ಪ್ರಕರಣಗಳಲ್ಲಿ ಅಧಿನಿಯಮ ಬಳಸಿ ನ್ಯಾಯಾಲಯದಲ್ಲಿ ದಾವೆ ಹಾಕಿ ಪರಿಹಾರ ಪಡೆಯಬಹುದು ಎಂದು ಮೈಗ್ರಾಪದ ಎಂ. ಆಕರ್ಷ್ ತಿಳಿಸಿದ್ದಾರೆ.
ಇದರ ಜತೆಗೆ 1986ರ ಗ್ರಾಹಕ ಸಂರಕ್ಷಣಾ ಅಧಿನಿಯಮದ ಕೆಳಗೆ ಗ್ರಾಹಕ ನ್ಯಾಯಾಲಯಗಳಿಗೆ ದೂರು ಸಲ್ಲಿಸಿ ಸುಲಭವಾಗಿ ಮತ್ತು ಕ್ಷಿಪ್ರವಾಗಿ ನ್ಯಾಯ ಪಡೆಯುವ ಆಯ್ಕೆಯೂ ಗ್ರಾಹಕರಿದೆ. ಆದರೆ, ಪ್ರತಿವಾದಿಯ ನಿರ್ಲಕ್ಷ್ಯದಿಂದ ಉಂಟಾದ ನಷ್ಟಕ್ಕೆ ಮಾತ್ರ ಗ್ರಾಹಕ ಅಧಿನಿಯಮ 14(1)(ಡಿ) ಕಲಮು ಪರಿಹಾರ ನೀಡುತ್ತದೆ. ಇದನ್ನು ಸಾಬೀತು ಮಾಡುವ ಜವಾಬ್ದಾರಿ ಗ್ರಾಹಕರದ್ದೆ ಆಗಿರುತ್ತದೆ. ಒಂದು ವೇಳೆ ಕೊರಿಯರ್ ಸಂಸ್ಥೆಯು ಷರತ್ತುಗಳನ್ನು ವಿಧಿಸದೆ ನಿಮ್ಮಿಂದ ವಸ್ತು ಪಡೆದು ಹಾಳು ಮಾಡಿದಾಗ ನ್ಯಾಯಾಲಯ ಹೆಚ್ಚಿನ ಮೊತ್ತದ ಪರಿಹಾರ ನೀಡುತ್ತದೆ. ಈ ಸಂದರ್ಭದಲ್ಲಿ ರಾಷ್ಟ್ರೀಯ ಗ್ರಾಹಕ ಆಯೋಗದ ತೀರ್ಪಿನ (ಐಐಐ 92003) ಈಕಿಒ 160 (ಃಈ) ಸಹಾಯ ಪಡೆಯಬಹುದು ಎಂದಿದ್ದಾರೆ.