ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ
ಮೈಸೂರು: ಪರಿಸರ, ಗ್ರಾಮ ನೈರ್ಮಲ್ಯ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಮೂಲಕ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಗ್ರಾಮೀಣ ಯುವಕ ಸಂಘ, ಯುವತಿ ಮಂಡಳಿ, ಮಹಿಳಾ ಮಂಡಳಿ ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಯುವ ಸಂಘ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಶಸ್ತಿಯು 10 ಸಾವಿರ ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ. ಜಿಲ್ಲಾಮಟ್ಟದ ಪ್ರಶಸ್ತಿ ಸ್ವೀಕರಿಸಿದ ಸಂಘ, ಸಂಸ್ಥೆಗಳು ರಾಜ್ಯಮಟ್ಟಕ್ಕೆ ಅರ್ಹತೆ ಪಡೆಯುತ್ತವೆ. ಈ ಸಂಘ ಸಂಸ್ಥೆಗಳು 2012ರ ಏಪ್ರಿಲ್ 1 ರಿಂದ 2013ರ ಮಾರ್ಚ್ 31ರ ಅವಧಿಯಲ್ಲಿ ಸಲ್ಲಿಸಿದ ಸೇವಾ ಕಾರ್ಯ ಪರಿಗಣಿಸಲಾಗುತ್ತದೆ. ಆಸಕ್ತರು ಜಿಲ್ಲಾ ಯುವಜನ ಸಮನ್ವಯಾಧಿಕಾರಿಗಳ ಕಾರ್ಯಾಲಯ, ನೆಹರು ಯುವ ಕೇಂದ್ರ, ನಂ. 26/ಎ, ಇಂಡಸ್ಟ್ರಿಯಲ್ ಸಬರ್ಬ್, 3ನೇ ಹಂತ, ರಾಜರಾಜೇಶ್ವರಿ ದೇವಸ್ಥಾನ ರಸ್ತೆ, ವಿಶ್ವೇಶ್ವರನಗರ, ಮೈಸೂರು- 08 ಇಲ್ಲಿ ಅರ್ಜಿ ಪಡೆದು ಸೆ.20ರ ಸಂಜೆ 5ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ.0821- 2489858 ಅಥವಾ 2489853 ಸಂಪರ್ಕಿಸಬಹುದು ಎಂದು ಜಿಲ್ಲಾ ಯುವಜನ ಸಮನ್ವಯಾಧಿಕಾರಿ ಎಂ.ಎನ್. ನಟರಾಜ್ ತಿಳಿಸಿದ್ದಾರೆ.