ಧರ್ಮೇಂದ್ರನಿಂದ ಮತ್ತೆ 5 ಸರಗಳ ವಶ
ಮೈಸೂರು: ಕುವೆಂಪುನಗರ ಠಾಣೆ ಪೊಲೀಸರು ಸರಗಳ್ಳ ಧರ್ಮೇಂದ್ರಪ್ರಸಾದ್ನಿಂದ 3.6 ಲಕ್ಷ ಮೌಲ್ಯದ 5 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ನ್ಯಾಯಾಂಗ ಬಂಧನದಲ್ಲಿದ್ದ ಧರ್ಮೇಂದ್ರನನ್ನು ಕುವೆಂಪುನಗರ ಠಾಣೆ ಪೊಲೀಸರು 5 ದಿನ ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಧರ್ಮೇಂದ್ರ ನೀಡಿದ ಸುಳಿವಿನ ಮೇರೆಗೆ ಕುವೆಂಪುನಗರ ಠಾಣೆ ವ್ಯಾಪ್ತಿಯ 5 ಪ್ರಕರಣಗಳಿಗೆ ಸಂಬಂಧಿಸಿದಂತೆ 120 ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
44 ಸರ ವಾಪಸ್: ಕಳೆದ ಒಂದೂವರೆ ತಿಂಗಳಲ್ಲಿ 11 ಮಂದಿ ಸರ ಅಪಹರಣಕಾರರನ್ನು ಬಂಧಿಸಿ 54 ಸರ ಅಪಹರಣ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 44 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಅನುಮತಿ ಪಡೆದು ವಾರಸುದಾರರಿಗೆ ಸರಗಳನ್ನು ವಾಪಸ್ ನೀಡಲಾಗುವುದು ಎಂದು ್ಚಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದರು.
ಆರೋಪಿ ಧರ್ಮೇಂದ್ರಪ್ರಸಾದ್ ಬಂಧನದಿಂದ ಈವರೆಗೆ 37 ಸರ ಅಪಹರಣ ಪ್ರಕರಣಗಳು ಪತ್ತೆಯಾಗಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.