ಬದಲಾದ ಆಹಾರ ಪದ್ಧತಿಯಿಂದ ಹೃದ್ರೋಗ ಜಾಸ್ತಿ
ಕ.ಪ್ರ. ವಾರ್ತೆ ಮೈಸೂರು ಸೆ.10
ಬದಲಾದ ಆಹಾರ ಪದ್ಧತಿಯಿಂದಾಗಿ ನಗರ ಪ್ರದೇಶದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೃದ್ರೋಗ ತಜ್ಞ ಡಾ.ಕೆ.ಎಸ್. ಸದಾನಂದ ಅಭಿಪ್ರಾಯಪಟ್ಟರು.
ಕುವೆಂಪುನಗರದ ಭಾರತೀಯ ಜೀವಾ ವಿಮಾ ನಿಗಮ ಶಾಖೆಯಲ್ಲಿ ಏರ್ಪಡಿಸಿದ್ದ ವಿಮಾ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಗೂ ಹೃದಯಾಘಾತ ಉಂಟಾಗುತ್ತಿರುವುದು ಆಘಾತಕಾರಿ ಸಂಗತಿ. ನಗರ ಪ್ರದೇಶದ ಶೇ.11 ರಷ್ಟು ಮತ್ತು ಗ್ರಾಮೀಣ ಪ್ರದೇಶದ ಶೇ.6 ರಷ್ಟು ಮಂದಿ ಇಂದಿಗೂ ಹೃದ್ರೋಗ ಸಮಸ್ಯೆಗೆ ತುತ್ತಾಗಿದ್ದಾರೆ. ಇದಕ್ಕೆ ಬದಲಾದ ಆಹಾರ ಪದ್ಧತಿಯೇ ಕಾರಣ ಎಂದು ಹೇಳಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಶಾಖಾಧಿಕಾರಿ ಆರ್. ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ಬೂಕನಕೆರೆ ವಿಜೇಂದ್ರ ಮತ್ತು ಸಿಬ್ಬಂದಿ ಇದ್ದರು.