ರೈತ ಸಂಜೀವಿನಿ ಸಹಾಯಧನ ವಿತರಣೆ
ಕ.ಪ್ರ. ವಾರ್ತೆ ಕೆ.ಆರ್. ನಗರ ಸೆ.10
ತಾಲೂಕು ಎಪಿಎಂಸಿ ವತಿಯಿಂದ ಕಳೆದ 3 ವರ್ಷದ ಅವಧಿಯಲಿ 29 ಮಂದಿಗೆ ರೈತ ಸಂಜೀವಿನಿ ಯೋಜನೆಯಡಿ 15 ಲಕ್ಷ ಸಹಾಯಧನ ನೀಡಲಾಗಿದೆ ಎಂದು ಉಪಾಧ್ಯಕ್ಷ ತೋಟಪ್ಪನಾಯಕ ಹೇಳಿದರು.
ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಮೃತಪಟ್ಟ ತಾಲೂಕಿನ ಬೀಚನಹಳ್ಳಿ ಗ್ರಾಮದ ಬಿ.ಎನ್. ನಾಗೇಶ್ ಅವರ ಪತ್ನಿ ವಿಮಲ ಅವರಿಗೆ ರೈತ ಸಂಜೀವಿನಿ ಯೋಜನೆಯ ವತಿಯಿಂದ ಎಪಿಎಂಸಿ ಆಡಳಿತ ಕಚೇರಿಯಲ್ಲಿ 50 ಸಾವಿರ ಚೆಕ್ ವಿತರಿಸಿ ಮಾತನಾಡಿದ ಅವರು ಅರ್ಹರನ್ನು ಗುರುತಿಸಿ ಅನುಕೂಲ ಕಲ್ಪಿಸಲಾಗಿದೆ ಎಂದರು.
45 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಬಿವೃದ್ಧಿ, ಮುಖ್ಯ ಮಾರುಕಟ್ಟೆಯಲ್ಲಿ ಶೌಚಾಲಯ ಸೇರಿದಂತೆ ಪ್ರಸಕ್ತ ಸಾಲಿನಲ್ಲಿ 6 ಕೃಷಿ ಕಣಗಳನ್ನು ನಿರ್ಮಾಣ ಮಾಡಲಾಗುತ್ತದೆ. ರಸ್ತೆಯಲ್ಲಿ ಒಕ್ಕಣೆ ಮಾಡುವ ರೈತರು ಇವುಗಳ ಅನುಕೂಲ ಪಡೆಯಿರಿ ಎಂದ ಅವರು, ಪಟ್ಟಣ ಸೇರಿದಂತೆ ಸಾಲಿಗ್ರಾಮದಲ್ಲಿಯು ಕೃಷಿ ಉತ್ನನ್ನ ಮಾರುಕಟ್ಟೆ ಇದ್ದು ತಾಲೂಕಿನ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಬೇಕೆಂದು ಮನವಿ ಮಾಡಿದರು.
ಸಹ- ಕಾರ್ಯದರ್ಶಿ ಬಸವರಾಜು, ಲೆಕ್ಕಪರಿಶೋಧಕ ನಾಗರಾಜಶೆಟ್ಟಿ, ಪಂಪಂಬಾ, ಚಂದ್ರು, ಬೋರೇಗೌಡ ಇದ್ದರು.